ಬೆಂಗಳೂರು : ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾದ ಪರಿಶಿಷ್ಟ ಜಾತಿ,ಪಂಗಡಕ್ಕೆ ಸೇರಿದ ದಂಪತಿಗೆ ‘ಸರಳ ವಿವಾಹ ಯೋಜನೆ’ ಅಡಿಯಲ್ಲಿ ನೆರವು ನೀಡಲು ಸರ್ಕಾರ ಕ್ರಮ ಕೈಗೊಂಡಿದೆ.
ನೋಂದಾಯಿತ ಸಂಘ-ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ವ್ಯವಸ್ಥೆ ಮಾಡುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿಯ ದಂಪತಿಗಳಿಗೆ ರೂ. 50,000 ಆರ್ಥಿಕ ನೆರವು ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ 9482 300 400 ಸಂಪರ್ಕಿಸಬಹುದಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
2015-16ನೇ ಸಾಲಿನ ಆಯವ್ಯಯ ಭಾಷಣದಲ್ಲಿ, ‘ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳ ವಿವಾಹ ಮಾಡಿಕೊಂಡ ಪ.ಜಾತಿ,ಪಂಗಡದ ದಂಪತಿಗೆ ಸರಳ ವಿವಾಹ ಯೋಜನೆಯಡಿ ಜೀವನೋಪಾಯಕ್ಕಾಗಿ ಸುಮಾರು 50 ಸಾವಿರ ರೂ. ಆರ್ಥಿಕ ನೆರವು ಒದಗಿಸಲಾಗುವುದು,’ ಎಂದು ಸರಕಾರ ಘೋಷಣೆ ಮಾಡಿತ್ತು.