ಭಾರತೀಯ ರೈಲ್ವೆ 30,307 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ವಿವಿಧ ವಿಷಯಗಳಲ್ಲಿ ಪದವಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು.
ಪದವೀಧರ ಕೆಟಗರಿಯಲ್ಲಿ ಬರೋಬ್ಬರಿ 30,307 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುವುದು. ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಯಲ್ಲಿ ಕಳೆದ ವರ್ಷ 8113 ಹುದ್ದೆಗಳನ್ನು ಪದವೀಧರರಿಗೆ ಹಾಗೂ 3445 ಹುದ್ದೆಗಳನ್ನು ಪದವಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿದವರಿಗೆ ಮೀಸಲಾಗಿಡಲಾಗಿತ್ತು.
ಆನ್ಲೈನ್ ಅರ್ಜಿ ಸಲ್ಲಿಕೆ ಆಗಸ್ಟ್ 30 ರಂದು ಆರಂಭವಾಗಿ ಸೆಪ್ಟೆಂಬರ್ 29ಕ್ಕೆ ಕೊನೆಯಾಗಲಿದೆ. ಟಿಕೆಟ್ ಸೂಪರ್ ವೈಸರ್, ಸ್ಟೇಷನ್ ಮಾಸ್ಟರ್, ಗೂಡ್ಸ್ ಟ್ರೈನ್ ಮ್ಯಾನೇಜರ್, ಜೂನಿಯರ್ ಅಕೌಂಟೆಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುವುದು.
ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಆಧಾರ್ ಆಧಾರಿತ ಇ-ಕೆವೈಸಿ, ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಅಳವಡಿಕೆ ಸೇರಿ ಅನೇಕ ಕ್ರಮ ಕೈಗೊಳ್ಳಲಾಗುವುದು.
ಈ ವರ್ಷ 50,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಚಾಲನೆ ನೀಡುವುದಾಗಿ ರೈಲ್ವೆ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಅದರ ಮೊದಲ ಹಂತದಲ್ಲಿ 6000ಕ್ಕೂ ಹೆಚ್ಚು ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು.