ನಕಲಿ ದಾಖಲೆ ಸೃಷ್ಟಿಸಿ ಐವರಿಗೆ ಜಾಮೀನು: ಆರೋಪಿಗಳು ಸೇರಿ 7 ಮಂದಿ ವಿರುದ್ಧ ಕೇಸು ದಾಖಲು

ಶಿವಮೊಗ್ಗ: ನಕಲಿ ದಾಖಲೆ ಸೃಷ್ಟಿಸಿ ಶಿವಮೊಗ್ಗ ನ್ಯಾಯಾಲಯದಲ್ಲಿ ಐವರು ಆರೋಪಿಗಳಿಗೆ ವ್ಯಕ್ತಿಯೊಬ್ಬ ಜಾಮೀನು ನೀಡಿದ್ದಾನೆ. ಜಾಮೀನು ಪಡೆದವರಲ್ಲಿ ಒಬ್ಬ ವಿಚಾರಣೆಗೆ ಹಾಜರಾಗದಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇಬ್ರಾಹಿಂ ಖಲೀಲ್, ಫೈರೋಜ್, ಅರ್ಬಾಜ್, ನಯಾಜ್ ಅಹಮದ್, ಸುಹೇಲ್ ಎಂಬ ಆರೋಪಿಗಳಿಗೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಜಗದೀಶ್ ಎಂಬುವರು ಶಿವಮೊಗ್ಗ ನ್ಯಾಯಾಲಯದಲ್ಲಿ ಜಾಮೀನುದಾರರಾಗಿದ್ದರು. ಈ ಪ್ರಕರಣದಲ್ಲಿ ಐದನೇ ಆರೋಪಿ ಸುಹೇಲ್ ಜಾಮೀನು ಪಡೆದ ನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ.

ನಂತರ ಜಾಮೀನುದಾರ ಜಗದೀಶ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಂತೆಯೇ ನ್ಯಾಯಾಲಯಕ್ಕೆ ಹಾಜರಾದ ಅವರು ತಾನು ಯಾರಿಗೂ ಜಾಮೀನು ನೀಡಿಲ್ಲ. ಅಲ್ಲದೆ ಪ್ರಮಾಣಪತ್ರದಲ್ಲಿರುವ ಫೋಟೋ ಕೂಡ ನನ್ನದಲ್ಲ. ಮತ್ತು ಆರೋಪಿಗಳು ನನಗೆ ಪರಿಚಯವಿಲ್ಲ ಎಂದು ಕೋರ್ಟ್ ಗೆ ಹಾಜರಾಗಿ ನ್ಯಾಯಾಧೀಶರ ಮುಂದೆ ಮಾಹಿತಿ ನೀಡಿದ್ದಾರೆ.

ಆಗ ನಕಲಿ ದಾಖಲೆ ಸೃಷ್ಟಿಸಿ ಅಪರಿಚಿತನೊಬ್ಬ ಜಗದೀಶ್ ಹೆಸರಲ್ಲಿ ಜಾಮೀನು ನೀಡಿರುವುದು ಗೊತ್ತಾಗಿದೆ. ಈ ಬಗ್ಗೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಜಾಮೀನುದಾರನಾಗಿ ಬಂದಿದ್ದ ವ್ಯಕ್ತಿ, ಆತನನ್ನು ಕರೆತಂದಿದ್ದ ನಸರುಲ್ಲಾ ಮತ್ತು ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read