ಡಿಗ್ರಿ ಕಲಿತ ಪತ್ನಿ, 8ನೇ ಕ್ಲಾಸ್ ಓದಿರುವ ಗಂಡ; ಇಂಗ್ಲೀಷ್ ನಲ್ಲಿ ಪತಿ ಕುಟುಂಬಕ್ಕೆ ಗೇಲಿ…!

ಉತ್ತರ ಪ್ರದೇಶದ ಆಗ್ರಾದಲ್ಲಿ ವೈವಾಹಿಕ ಜೀವನ ಕಲಹದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ದಂಪತಿಯ ವಿದ್ಯಾಭ್ಯಾಸದ ವ್ಯತ್ಯಾಸದಿಂದ ಪತಿ-ಪತ್ನಿ ಸಂಬಂಧ ಹಳಸಿದ್ದು ಇಂಗ್ಲಿಷ್ ಕಲಿತಿರುವ ಪತ್ನಿ ಗಂಡನನ್ನು ನಿಂದಿಸಿರೋದು ಸುದ್ದಿಯಾಗಿದೆ.

ಪತ್ನಿ ಪದವೀಧರೆಯಾಗಿದ್ದು ಆಂಗ್ಲ ಮಾಧ್ಯಮದಲ್ಲಿ ಓದಿದ್ದಾಳೆ. ಪತಿ ಕೇವಲ ಎಂಟನೇ ತರಗತಿ ತೇರ್ಗಡೆಯಾಗಿದ್ದು ಉದ್ಯಮಿಯಾಗಿದ್ದಾರೆ. ಪತ್ನಿಗೆ ಇಂಗ್ಲಿಷ್ ಮಾತನಾಡುವ ಅಭ್ಯಾಸದ ಬಗ್ಗೆ ವಿವಾದ ಉಂಟಾಗಿದೆ. ವಿವಾದ ಕೌಟುಂಬಿಕ ಸಲಹಾ ಕೇಂದ್ರಕ್ಕೆ ತಲುಪಿ, ಇಬ್ಬರ ನಡುವೆ ರಾಜಿ ನಡೆದಿದೆ.

ದಂಪತಿ ನವೆಂಬರ್ 2023 ರಲ್ಲಿ ವಿವಾಹವಾದರು. ಹುಡುಗಿಯ ತಂದೆ ತನ್ನ ವ್ಯವಹಾರದ ಕಾರಣದಿಂದ ವರನನ್ನು ಆಯ್ಕೆ ಮಾಡಿ ಮಗಳ ಜೀವನವು ಸಂತೋಷವಾಗಿರಲಿ ಎಂದು ಭಾವಿಸಿದರು. ಆದರೆ ಗಂಡನ ಕಡಿಮೆ ಶಿಕ್ಷಣದಿಂದ ಹುಡುಗಿಗೆ ಸಂತೋಷವಾಗಲಿಲ್ಲ, ಇದು ಕುಟುಂಬದಲ್ಲಿ ಉದ್ವಿಗ್ನತೆಗೆ ಕಾರಣವಾಯಿತು. ಎರಡು ತಿಂಗಳ ನಂತರ ವಧು ತನ್ನ ಪೋಷಕರ ಮನೆಗೆ ಹಿಂದಿರುಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ಕೌನ್ಸೆಲಿಂಗ್ ಸಮಯದಲ್ಲಿ ಪತ್ನಿ ತನ್ನನ್ನು ಮತ್ತು ತನ್ನ ಕುಟುಂಬವನ್ನು ‘ಗವಾರ್’ (ಅನಾಗರಿಕ) ಎಂದು ಕರೆದು ಅವಮಾನಿಸುತ್ತಿದ್ದಳು ಮತ್ತು ಇಂಗ್ಲಿಷ್‌ನಲ್ಲಿ ಗೇಲಿ ಮಾಡುತ್ತಿದ್ದಳು ಎಂದು ಪತಿ ಆರೋಪಿಸಿದ್ದಾರೆ.

ಶಾಪಿಂಗ್ ಗಾಗಿ ಪತ್ನಿ ಹೆಚ್ಚು ಖರ್ಚು ಮಾಡುತ್ತಾಳೆಂದು ಗಂಡ ಆರೋಪಿಸಿದ್ದಾರೆ. ಕೌಟುಂಬಿಕ ಕಲಹದ ಕಾರಣವನ್ನು ತಿಳಿದ ನಂತರ, ಆಪ್ತಸಮಾಲೋಚಕರು ಮಹಿಳೆಯೊಂದಿಗೆ ಮಾತನಾಡಿ ನೀವು ವಿದ್ಯಾವಂತಳಾಗಿದ್ದರೆ ಗಂಡನ ವ್ಯವಹಾರದಲ್ಲಿ ಸಹಾಯ ಮಾಡಬೇಕು ಮತ್ತು ಕಡಿಮೆ ಶಿಕ್ಷಣ ಪಡೆದಿರುವ ಅವನನ್ನು ಅವಮಾನಿಸಬಾರದು ಎಂದು ಅರ್ಥಮಾಡಿಸಿದರು. ಇದಾದ ಬಳಿಕ ದಂಪತಿ ರಾಜಿ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read