ಭೋಪಾಲ್: 22 ವರ್ಷದ ವಿದ್ಯಾರ್ಥಿಯನ್ನು ಪೊಲೀಸರು ಸುತ್ತುವರೆದು ಕೋಲಿನಿಂದ ಹೊಡೆದಿದ್ದು, ಆತ ಮೃತಪಟ್ಟಿದ್ದಾನೆ.
22 ವರ್ಷದ ಬಿಟೆಕ್ ವಿದ್ಯಾರ್ಥಿ ಉದಿತ್ ಗಾಯ್ಕೆ ಮೃತಪಟ್ಟವರು, ಆತನನ್ನು ಭೋಪಾಲ್ ನಲ್ಲಿ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳು ಹೊಡೆದ ನಂತರ ಸಾವನ್ನಪ್ಪಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಒಬ್ಬ ಪೊಲೀಸ್ ಅವರನ್ನು ಬಿಗಿಯಾಗಿ ಹಿಡಿದಿದ್ದರೆ, ಇನ್ನೊಬ್ಬ ಪೊಲೀಸ್ ಕೋಲಿನಿಂದ ಹೊಡೆದಿದ್ದಾನೆ.
ಉದಿತ್ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ತಡರಾತ್ರಿ ಹಿಂತಿರುಗುತ್ತಿದ್ದ. ಪೊಲೀಸರನ್ನು ಆತನನ್ನು ತಡೆದು ಹಣ ಕೇಳಿದ್ದಾರೆ. ಕೊಡದಿದ್ದಾಗ ಹಲ್ಲೆ ಮಾಡಿದ್ದಾರೆ. ಉದಿತ್ ಗಾಯ್ಕೆ ಅವರ ಮೇಲೆ ಹಲ್ಲೆ ಗುರುತು, ಗಾಯಗಳು ಮತ್ತು ಹರಿದ ಶರ್ಟ್ ಪತ್ತೆಯಾಗಿದೆ ಎಂದು ಅವರ ಸ್ನೇಹಿತರು ಹೇಳಿದ್ದಾರೆ.
ಈ ಸಂಬಂಧ ಕಾನ್ಸ್ಟೆಬಲ್ಗಳಾದ ಸಂತೋಷ್ ಬಮಾನಿಯಾ ಮತ್ತು ಸೌರಭ್ ಆರ್ಯ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಭೋಪಾಲ್ ವಲಯ 2 ರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ವಿವೇಕ್ ಸಿಂಗ್ ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿಯಿಂದ ಹಲ್ಲೆಗೊಳಗಾದ ಉದಿತ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಅವರ ಸ್ನೇಹಿತರ ಪ್ರಕಾರ, ಆರೋಪಿ ಕಾನ್ಸ್ಟೆಬಲ್ಗಳು ಬಲಿಪಶುವಿನ ಮೇಲೆ ಹಲ್ಲೆ ಮಾಡುವುದನ್ನು ನಿಲ್ಲಿಸಲು ಲಂಚ ಕೇಳಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಮೃತನ ಪೋಷಕರು ಭೋಪಾಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಸೋದರ ಮಾವ ಬಾಲಘಾಟ್ ಜಿಲ್ಲೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾರೆ.ಮರಣೋತ್ತರ ವರದಿ ಬಂದ ನಂತರ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ ಪರಾರಿಯಾಗಿರುವ ಆರೋಪಿ ಕಾನ್ಸ್ಟೆಬಲ್ಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಡಿಸಿಪಿ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Bhopal : 22 year old B. Tech student Udit was brutally thrashed by police just for partying with friends in their car. He later succumbed to injuries. A young life lost due to insensitivity of these cops who are now suspended. pic.twitter.com/dlrmgUmptU
— farhanayyubi@yahoomail.com (@farhanayyubid) October 10, 2025