ಕೇವಲ 38,199 ರೂ. ಗಳಿಗೆ ಸಿಗಲಿದೆ ಐಫೋನ್ 14; ಇಲ್ಲಿದೆ ಡಿಟೇಲ್ಸ್

ಐಫೋನ್ 15 ಕಾಲದಲ್ಲಿ ನೀವಿನ್ನೂ ಐಫೋನ್ 14 ಖರೀದಿಸಲು ಬಯಸಿದ್ದರೆ ಕಡಿಮೆ ದರದಲ್ಲಿ ನಿಮಗೆ ಈ ಫೋನ್ ಸಿಗಲಿದೆ. ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್‌ನಲ್ಲಿ ಆಪಲ್ ಐಫೋನ್ 21, 800 ರೂ. ಭಾರೀ ಕಡಿತದೊಂದಿಗೆ ಸಿಗಲಿದೆ. ಈಗಾಗಲೇ ಮಾರುಕಟ್ಟೆಗೆ ಐಫೋನ್ 15 ಪರಿಚಯವಾಗಿದ್ದು, ಇದರ ಬಿಡುಗಡೆ ನಂತರ‌ ಐಫೋನ್ 14 ರ ಬೆಲೆ ಗಮನಾರ್ಹವಾಗಿ ಕಡಿಮೆಯಾಗ್ತಿದ್ದು, 2024 ರ ಹೊಸ ವರ್ಷದ ಆರಂಭದಲ್ಲಿ ಫ್ಲಿಪ್‌ಕಾರ್ಟ್ ಮೊದಲ ಬಾರಿಗೆ ಐಫೋನ್ 14 ಅನ್ನು ಕಡಿಮೆ ಬೆಲೆಗೆ ನೀಡುತ್ತಿದೆ.

21, 800 ರೂ. ಭಾರೀ ಕಡಿತದೊಂದಿಗೆ ಐಫೋನ್ 14 ಇದೀಗ ಗ್ರಾಹಕರಿಗೆ ಫ್ಲಿಪ್ ಕಾರ್ಟ್ ನಲ್ಲಿ ಕೇವಲ 38,199 ರೂ. ಗೆ ಸಿಗಲಿದೆ. ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 14 ಪ್ರಸ್ತುತ ಬೆಲೆ 59,999 ರೂ ಆಗಿದೆ. 2022 ರಲ್ಲಿ ಬಿಡುಗಡೆಯಾದ ಐಫೋನ್ ಪ್ರೊ, ಫೋನ್ ಮ್ಯಾಕ್ಸ್ ಆರಂಭಿಕ ಬೆಲೆ 79,900 ರೂ. ಇತ್ತು.

ಆಪಲ್ ಐಫೋನ್ 15 ಸರಣಿಯ ಚೊಚ್ಚಲ ಬಿಡುಗಡೆ ನಂತರ ಐಫೋನ್ 14 ಬೆಲೆ 10,000 ರೂಪಾಯಿಗಳ ಕಡಿತ ಪಡೆಯಿತು. ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 14 ಪ್ರಸ್ತುತ ಬೆಲೆ 59,999 ರೂ ಇದ್ದು, ಅಧಿಕೃತ ಸ್ಟೋರ್ ಗಳಲ್ಲಿ 9,901 ರೂ.ಗಳ ರಿಯಾಯಿತಿಯನ್ನು ಹೊಂದಿದೆ. ಇದರೊಂದಿಗೆ ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿದೆ.

ಖರೀದಿದಾರರು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟುಗಳ ಮೂಲಕ ಹೆಚ್ಚುವರಿ ರೂ. 1500 ರಿಯಾಯಿತಿಯನ್ನು ಪಡೆಯಬಹುದು. ಇದರಿಂದಾಗಿ ಮೊಬೈಲ್ ಬೆಲೆ 58,499 ರೂ. ಆಗಲಿದೆ. ಅಷ್ಟೇ ಅಲ್ಲದೇ ಹಳೆಯ ಸ್ಮಾರ್ಟ್‌ಫೋನ್‌ಗಳ ವಿನಿಮಯ ಮಾಡಿಕೊಂಡರೆ ಫ್ಲಿಪ್‌ಕಾರ್ಟ್ ರೂ. 20,300 ವರೆಗೆ ರಿಯಾಯಿತಿಯನ್ನು ನೀಡುತ್ತಿದೆ.

ಫೋನ್ 14 ಮತ್ತು ಐಫೋನ್ 13 ಸಾಮಾನ್ಯ ಒಂದೇ ಮಾದರಿಯಲ್ಲಿದ್ದರೂ, ಉತ್ತಮ ಪ್ರೊಸೆಸರ್ ಮತ್ತು ಡೈನಾಮಿಕ್ ಐಲ್ಯಾಂಡ್ ನಾಚ್ ವಿನ್ಯಾಸದಂತಹ ಕೆಲವು ಗಮನಾರ್ಹ ಬದಲಾವಣೆಗಳನ್ನು ಹೊಂದಿವೆ. ಅದೇ ಡೈನಾಮಿಕ್ ಐಲ್ಯಾಂಡ್ ನಾಚ್ ಈಗ ಎಲ್ಲಾ ಐಫೋನ್ 15 ಮಾದರಿಗಳಲ್ಲಿ ಲಭ್ಯವಿದೆ.

ಐಫೋನ್ 13 ಗೆ ಹೋಲಿಸಿದರೆ ಐಫೋನ್ 14 ಕ್ಯಾಮೆರಾದಲ್ಲಿ ಕೆಲವು ಸುಧಾರಣೆಗಳನ್ನು ಮಾಡಲಾಗಿದೆ. ವೀಡಿಯೊ ಕರೆಗಳು ಮತ್ತು ಸೆಲ್ಫಿ ಎರಡಕ್ಕೂ 12MP ಕ್ಯಾಮೆರಾವನ್ನು ಹೊಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read