‘ಯುವನಿಧಿ’ ಯೋಜನೆಗಾಗಿ ರಾಜ್ಯ ಸರ್ಕಾರ ಹೆಚ್ಚು ‘ಮದ್ಯ’ ಮಾರಾಟ ಮಾಡುತ್ತಿದೆ : ಬಿಜೆಪಿ ವಾಗ್ಧಾಳಿ

ಬೆಂಗಳೂರು : 5 ನೇ ಗ್ಯಾರಂಟಿ ಯೋಜನೆಗೆ ಸರ್ಕಾರ ಪರದಾಡುತ್ತಿದೆ. ಯುವನಿಧಿಗಾಗಿ ಹೆಚ್ಚು ‘ಮದ್ಯ’ ಮಾರಾಟ ಮಾಡುತ್ತಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಟಾಂಗ್ ನೀಡಿದೆ.

ಕರ್ನಾಟಕದ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸದೆ , ರಾಜ್ಯದ ಬೊಕ್ಕಸವನ್ನು ಈಗಲೇ ಬರಿದು ಮಾಡಿದ್ದರ ಫಲವಾಗಿ ತಾನೇ ಹೇಳಿದ ಗ್ಯಾರಂಟಿ ಜಾರಿಗೆ ಹಣವಿಲ್ಲದಾಗಿದೆ. ನಿರುದ್ಯೋಗಿ ಯುವ ಜನತೆಗೆ ಹಣ ನೀಡಲು ಸರ್ಕಾರ ಮದ್ಯ ಮಾರಾಟ ಹೆಚ್ಚಳದ ಮೊರೆ ಹೋಗಿರುವುದು ಕಳವಳಕಾರಿ. ₹7,000 ಕೋಟಿಯಷ್ಟು ಹೆಚ್ಚುವರಿ ಮದ್ಯವನ್ನು ರಾಜ್ಯದ ಜನತೆಗೆ ಕುಡಿಸಿ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ಸರ್ಕಾರ ಗುರಿ ಇಟ್ಟಿರುವುದು ದುರಂತ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ಟಾಂಗ್ ನೀಡಿದೆ.

https://twitter.com/BJP4Karnataka/status/1736985958648627653

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read