ಭಾರತದಲ್ಲಿ ಟೆಸ್ಲಾ ಕಾರ್ ಉತ್ಪಾದನೆ ಮೊದಲ ಘಟಕ ಗುಜರಾತ್ ನಲ್ಲಿ ಆರಂಭ

ಅಹಮದಾಬಾದ್: ಉದ್ಯಮಿ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿ ಭಾರತದಲ್ಲಿ ತನ್ನ ಮೊದಲ ಉತ್ಪಾದನಾ ಘಟಕವನ್ನು ಗುಜರಾತ್ ನಲ್ಲಿ ಆರಂಭಿಸಲಿದೆ.

ಜನವರಿ 10 ಮತ್ತು 12 ರಂದು ಗುಜರಾತ್ ನ ಗಾಂಧಿನಗರದಲ್ಲಿ ನಡೆಯುವ ವೈಬ್ರೆಂಟ್ ಗುಜರಾತ್ ಕಾರ್ಯಕ್ರಮದಲ್ಲಿ ಎಲಾನ್ ಮಸ್ಕ್ ಕೂಡ ಭಾಗವಹಿಸಲಿದ್ದು, ಅವರೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಕಳೆದ ಜನವರಿಯಲ್ಲಿ ಟೆಸ್ಲಾ ಇಂಡಿಯಾ ಮೋಟಾರ್ ಅಂಡ್ ಎನರ್ಜಿ ಕಂಪನಿ ಹೆಸರಿನಲ್ಲಿ ಬೆಂಗಳೂರಿನಲ್ಲಿ ನೋಂದಾಯಿಸಿದ್ದು, ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು.

ಕಾರ್ ತಯಾರಿಕಾ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಭಾರತದಲ್ಲಿ ಟೆಸ್ಲಾ ಸಮೀಕ್ಷೆ ನಡೆಸಿದ್ದು, ಗುಜರಾತ್ ನಲ್ಲಿ ಮೊದಲ ಘಟಕ ಸ್ಥಾಪಿಸುವ ಬಗ್ಗೆ ಎಲಾನ್ ಮಸ್ಕ್ ಆಶಯ ಹೊಂದಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಗುಜರಾತ್ ಆರೋಗ್ಯ ಸಚಿವ ಹೃಷಿಕೇಶ್ ಪಟೇಲ್ ತಿಳಿಸಿದ್ದಾರೆ.

ಟೆಸ್ಲಾ ಕಂಪನಿಗೆ ಗುಜರಾತ್ ನಲ್ಲಿ ಘಟಕ ಸ್ಥಾಪನೆಗೆ ಪೂರಕ ವಾತಾವರಣ ಕಲ್ಪಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಗುಜರಾತ್ ನಲ್ಲಿ ಮಾರುತಿ ಸುಜುಕಿ, ಟಾಟಾ ಮೋಟಾರ್ ವಾಹನಗಳ ತಯಾರಿಕ ಘಟಕಗಳು ಈಗಾಗಲೇ ಇವೆ.

ಸ್ಥಾವರವನ್ನು ಸ್ಥಾಪಿಸಲು ಎಲಾನ್ ಮಸ್ಕ್ ನೇತೃತ್ವದ ಟೆಸ್ಲಾ ರಾಜ್ಯವನ್ನು ಆಯ್ಕೆ ಮಾಡುತ್ತದೆ ಮತ್ತು ಈ ನಿಟ್ಟಿನಲ್ಲಿ ಸಂಸ್ಥೆಯೊಂದಿಗೆ ಮಾಹಿತಿ ಸಂವಹನ ನಡೆಸುತ್ತಿದೆ ಎಂದು ಹೃಶಿಕೇಶ್ ಪಟೇಲ್ ತಿಳಿಸಿದ್ದು, ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಭರವಸೆ ಹೊಂದಿದೆ. ಎಲಾನ್ ಮಸ್ಕ್ ಕೂಡ ಗುಜರಾತ್ ಅನ್ನು ತನ್ನ ಮೊದಲ ಆಯ್ಕೆಯಾಗಿ ನೋಡುತ್ತಿದ್ದಾರೆ. ಸ್ಥಾವರವನ್ನು ಸ್ಥಾಪಿಸಲು ಸೂಕ್ತವಾದ ಸ್ಥಳವನ್ನು ಹುಡುಕಲು ಅವರು ಭಾರತದಲ್ಲಿ ಸಮೀಕ್ಷೆಯನ್ನು ಪ್ರಾರಂಭಿಸಿದಾಗಿನಿಂದ ಗುಜರಾತ್ ಅವರ ಮನಸ್ಸಿನಲ್ಲಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read