ಸಿನಿಮಾ ಮಾಡುವುದಾಗಿ ನಂಬಿಸಿ ಖ್ಯಾತ ನಿರ್ದೇಶಕನಿಗೆ ಸರ್ಕಾರಿ ಅಧಿಕಾರಿಯಿಂದ ಮೋಸ; ದೂರು ದಾಖಲು

ಹುಬ್ಬಳ್ಳಿ: ಸಿನಿಮಾ ಮಾಡುವುದಾಗಿ ನಿರ್ದೇಶಕರೊಬ್ಬರನ್ನು ನಂಬಿಸಿದ್ದ ಸರ್ಕಾರಿ ಅಧಿಕಾರಿ ಮೋಸ ಮಾಡಿರುವ ಆರೋಪ ಕೇಳಿಬಂದಿದೆ.

ಹುಬ್ಬಳ್ಳಿ-ಧಾರವಾಡ ವಯಲ ಅಧಿಕಾರಿ ಉದಯ್ ಕುಮಾರ್ ತಳವಾರ, ತಾವು ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿ ಮದರಂಗಿ ಸಿನಿಮಾ ನಿರ್ದೇಶಕ ಮಲ್ಲಿಕಾರ್ಜುನ ಮುತ್ತಲಗೇರಿಗೆ ಮೋಸ ಮಾಡಿದ್ದಾರಂತೆ. ಈ ಬಗ್ಗೆ ನಿರ್ದೇಶಕ ಜಿಲ್ಲಾ ಆಯುಕ್ತರಿಗೆ ದೂರು ನೀಡಿದ್ದಾರೆ.

ಅಧಿಕಾರಿ ಉದಯ್ ಕುಮಾರ್, ನಿರ್ದೇಶಕ ಮಲ್ಲಿಕಾರ್ಜುನ ಜೊತೆ ತಾವು ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿ ಒಪ್ಪಂದ ಮಾಡಿಕೊಂಡಿದ್ದರಂತೆ. ಮುಂಗಡವಾಗಿ 1 ಲಕ್ಷ ರೂಪಾಯಿ ಹಣವನ್ನೂ ನೀಡಿದ್ದರಂತೆ. ಅದರಂತೆ ಸಿನಿಮಾಗಾಗಿ ಮಲ್ಲಿಕಾರ್ಜುನ ತಯಾರಿ ನಡೆಸಿದ್ದರಂತೆ. ನಾಯಕ ನಟನಾಗಿ ಅಂಜನ್ ಅವರನ್ನು ಆಯ್ಕೆ ಮಾಡಲಾಗಿತ್ತಂತೆ. ಆದರೆ ಉದಯ್ ಕುಮಾರ್ ಸಿನಿಮಾ ಮಾಡುವ ತಮ್ಮ ಯೋಜನೆಯನ್ನು ಮುಂದೂಡತ್ತಲೇ ಬರುತ್ತಿದ್ದಾರೆ. ಸಂಬಳವನ್ನೂ ನೀಡಿತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕಳೆದ ಏಳು ತಿಂಗಳಿಂದ ನಿರ್ದೇಶಕರಿಗೆ, ನಟರಿಗೆ, ತಂತ್ರಜ್ಞರಿಗೆ ಸಂಬಳವನ್ನೂ ನೀಡಿಲ್ಲ. ಸಂಬಳ ಕೇಳಿದ್ದಕ್ಕೆ ಈಗ ಬೆದರಿಕೆ ಹಾಕುತ್ತಿದ್ದಾರೆ. ಸಿನಿಮಾ ಮಾಡದಿದ್ದರೂ ಪರವಾಗಿಲ್ಲ. ಆದರೆ ಕಳೆದ 7 ತಿಂಗಳ ಸಂಬಳವನ್ನು ಕೊಟ್ಟರೆ ಸಾಕು ಎಂದು ಮಲ್ಲಿಕಾರ್ಜುನ್ ಒತ್ತಾಯಿಸಿದ್ದು, ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಆಯುಕ್ತರಿಗೆ ದೂರು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read