BIG BREAKING: ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ: ಆ. 1 ರಿಂದಲೇ ವೇತನ ಹೆಚ್ಚಳ: 7ನೇ ವೇತನ ಆಯೋಗ ವರದಿ ಜಾರಿಗೆ ಸಂಪುಟ ಸಭೆ ನಿರ್ಣಯ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಏಳನೇ ವೇತನ ಆಯೋಗ ಶಿಫಾರಸು ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿದ್ದು, ಆಗಸ್ಟ್ 1ರಿಂದಲೇ ವೇತನ ಆಯೋಗ ಶಿಫಾರಸು ಜಾರಿಯಾಗಲಿದೆ.

ಮುಂದಿನ ತಿಂಗಳಿನಿಂದಲೇ ನೌಕರರ ವೇತನ ಹೆಚ್ಚಾಗಲಿದೆ. ಹಣಕಾಸು ಇಲಾಖೆಯ ವರದಿಯ ಬಳಿಕ ಸಿಎಂ ನಿರ್ಧಾರ ಕೈಗೊಂಡಿದ್ದಾರೆ.

ಆಗಸ್ಟ್ 1ರಿಂದ 7ನೇ ವೇತನ ಆಯೋಗ ಶಿಫಾರಸ್ಸು ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.

ಮುಂದಿನ ತಿಂಗಳಿಂದಲೇ ವೇತನ ಹೆಚ್ಚಳ ಮಾಡಲಾಗುವುದು. ಮಾರ್ಚ್ 16 ರಂದು ಕೆ. ಸುಧಾಕರ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಸಿಎಂ ಸ್ವೀಕರಿಸಿದ್ದರು.

ಶಿಫಾರಸು ಜಾರಿ ಬಗ್ಗೆ ಹಣಕಾಸು ಇಲಾಖೆಯ ಮಾಹಿತಿ ಕೇಳಿದ್ದರು. ಹಣಕಾಸು ಹೊಂದಾಣಿಕೆ ಬಗ್ಗೆ ಮಾಹಿತಿ ನೀಡಿದಂತೆ ಸಿಎಂ ಸೂಚಿಸಿದ್ದು, ಹಣಕಾಸು ಇಲಾಖೆಯ ವರದಿಯ ಬಳಿಕ ನಿರ್ಧಾರ ಕೈಗೊಂಡಿದ್ದಾರೆ.

ಏಳನೇ ವೇತನ ಆಯೋಗದ ಶಿಫಾರಸು ಜಾರಿಗೆ ಸಂಪುಟ ಸಭೆಗೆ ಸಿಎಂ ಮಾಹಿತಿ ನೀಡಿದ್ದು, ಆಗಸ್ಟ್ 1ರಿಂದ ವೇತನ ಆಯೋಗದ ಶಿಫಾರಸು ಜಾರಿ ತೀರ್ಮಾನ ಕೈಗೊಳ್ಳಲಾಗಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ 7ನೇ ವೇತನ ಆಯೋಗಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ 1-7- 22 ರಿಂದ ಕಾಲ್ಪನಿಕವಾಗಿ ವೇತನ ನಿಗದಿ, 1-8- 24 ರಿಂದ ಆರ್ಥಿಕ ಸೌಲಭ್ಯವನ್ನು ನೀಡಲು ಹಾಗೂ ವೇತನ ಆಯೋಗ ಶಿಫಾರಸು ಮಾಡಿದ 27.50% ವೇತನ  ವೇತನ ನಿಗದಿಗೆ ಅನುಮೋದನೆ ನೀಡಿರುತ್ತದೆ.

ಶೇ. 27.5ರಷ್ಟು ವೇತನ ಪರಿಷ್ಕರಣೆಗೆ ಆಯೋಗ ಶಿಫಾರಸು ಮಾಡಿದೆ. 2023ರ ಮಾರ್ಚ್ ನಿಂದ ಶೇಕಡ 17ರಷ್ಟು ಮಧ್ಯಂತರ ಪರಿಹಾರ ನೀಡಲಾಗಿದ್ದು, ಇನ್ನೂ ಶೇಕಡ 10.5ರಷ್ಟು ವೇತನ ಹೆಚ್ಚಳ ಆಗಬೇಕಿದೆ. ಇದರಿಂದ ಸರ್ಕಾರಕ್ಕೆ ಸುಮಾರು 7500 ಕೋಟಿ ರೂ. ಹೆಚ್ಚುವರಿ ಹೊರೆಯಾಗುವ ನಿರೀಕ್ಷೆ ಇದೆ.

https://twitter.com/siddaramaiah/status/1812890132946817268

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read