ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ನಟ ಗೋವಿಂದ ಸೋದರ ಸೊಸೆ 24 ಗಂಟೆಯೊಳಗೇ ವಾಪಾಸ್

ಬಾಲಿವುಡ್ ನಟ ಗೋವಿಂದ ಅವರ ಸೋದರ ಸೊಸೆ ಮತ್ತು ಜನಪ್ರಿಯ ಕಿರುತೆರೆ ನಟಿ ರಾಗಿಣಿ ಖನ್ನಾ ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಮರುದಿನವೇ ಹಿಂದೂಧರ್ಮಕ್ಕೆ ವಾಪಸ್ಸಾಗಿದ್ದಾರೆ.

ಇತ್ತೀಚಿಗೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಅದರ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಹುಬ್ಬೇರುವಂತೆ ಮಾಡಿದ್ದ ಅವರು ಇನ್ನು ಮುಂದೆ ಕ್ರಿಶ್ಚಿಯನ್ ಸಂಪ್ರದಾಯವನ್ನು ಅನುಸರಿಸುವುದಾಗಿ ಘೋಷಿಸಿದ್ದರು. ಆದಾಗ್ಯೂ ಮತಾಂತರಗೊಂಡ 24 ಗಂಟೆಗಳ ಒಳಗೆ ರಾಗಿಣಿ ತಮ್ಮ ಕ್ರಮಗಳಿಗೆ ಕ್ಷಮೆಯಾಚಿಸಿ ಹಿಂದೂ ಧರ್ಮಕ್ಕೆ ಮರಳಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವ ಕುರಿತು ಹಾಕಿದ್ದ ತಮ್ಮ ಹಿಂದಿನ ಪೋಸ್ಟ್ ಅನ್ನು ರಾಗಿಣಿ ಖನ್ನಾ ಡಿಲೀಟ್ ಮಾಡಿದ್ದಾರೆ. ಅವರ ಹೊಸ ಪೋಸ್ಟ್ ನಲ್ಲಿ “ಹಾಯ್, ನಾನು ರಾಗಿಣಿ ಖನ್ನಾ. ನಾನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನನ್ನ ಹಿಂದಿನ ರೀಲ್‌ಗಳಿಗಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ನನ್ನ ಮಾತೃಧರ್ಮಕ್ಕೆ ಮರಳಿದ್ದೇನೆ ಮತ್ತು ಈಗ ಕಟ್ಟರ್ ಹಿಂದೂ ಸನಾತನಿಯ ಮಾರ್ಗವನ್ನು ಅಳವಡಿಸಿಕೊಂಡಿದ್ದೇನೆ” ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read