ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡವರಿಗೆ ಸರ್ಕಾರದಿಂದ ಗುಡ್ ನ್ಯೂಸ್: ರಾಜ್ಯಾದ್ಯಂತ ಉಚಿತ ಡಯಾಲಿಸಿಸ್ ವ್ಯವಸ್ಥೆಗೆ ಸಿಎಂ ಚಾಲನೆ

ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡವರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯದಾದ್ಯಂತ ಏಕಬಳಕೆ ಡಯಾಲೈಸರ್ ಗಳ ಕಾರ್ಯಾರಂಭವಾಗಿದೆ.

ರಾಜ್ಯದಲ್ಲಿ 800 ಏಕ ಬಳಕೆ ಡಯಾಲೈಸರ್ ಕಾರ್ಯಾಚರಣೆ ಆರಂಭಿಸಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ 20 ಡಯಾಲೈಸರ್ ಯಂತ್ರಗಳಿಗೆ ಚಾಲನೆ ನೀಡಿದ್ದಾರೆ.

ಪ್ರತಿದಿನ 72 ರೋಗಿಗಳಿಗೆ ಡಯಾಲಿಸಿಸ್ ಸೇವೆ ಒದಗಿಸುವ ಸಾಮರ್ಥ್ಯವಿದೆ. ಡಯಾಲಿಸಿಸ್ ಸೆಂಟರ್ ಗಳು ಸರಿಯಾಗಿ ಕಾರ್ಯನಿರ್ವಹಿಸದೆ ಬಡ ರೋಗಿಗಳು ಪರದಾಟ ನಡೆಸಿದ್ದರು. ರಾಜ್ಯದ ಹಲವು ಕಡೆ ಡಯಾಲಿಸಿಸ್ ಅವಶ್ಯಕತೆ ಇರುವ ರೋಗಿಗಳು ಪರದಾಡುತ್ತಿದ್ದು, ಈಗ ಉಚಿತವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಆರೋಗ್ಯ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿದೆ. ಓರ್ವ ರೋಗಿ ಡಯಾಲಿಸಿಸ್ ಗೆ 1573 ರೂ. ವೆಚ್ಚವಾಗುತ್ತದೆ. ಇದಕ್ಕಾಗಿ ವಾರ್ಷಿಕ 108 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ವೆಚ್ಚ ಮಾಡಲಿದೆ ಎಂದು ಹೇಳಲಾಗಿದೆ.

ರಾಜ್ಯದ್ಯಂತ 219 ಡಯಾಲಿಸಿಸ್ ಕೇಂದ್ರಗಳಲ್ಲಿ 800 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗಿದೆ. ಬೆಂಗಳೂರು ವಿಭಾಗದಲ್ಲಿ 250, ಬೆಳಗಾವಿ ವಿಭಾಗಕ್ಕೆ 201. ಮೈಸೂರು ವಿಭಾಗಕ್ಕೆ 222. ಕಲಬುರ್ಗಿ ವಿಭಾಗಕ್ಕೆ 127 ಡಯಾಲಿಸಿಸ್ ಯಂತ್ರಗಳಿವೆ.

108 ಕೋಟಿ ರೂಪಾಯಿ ವಾರ್ಷಿಕ ವೆಚ್ಚದ ಉಚಿತ ಡಯಾಲಿಸಿಸ್ ಸೇವೆಯನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮ ಹಾಗೂ ರಾಜ್ಯದ ಅನುದಾನದಲ್ಲಿ ರೂಪಿಸಲಾಗಿದೆ. ಸೋಂಕು ರಹಿತ ಡಯಾಲಿಸಿಸ್ ಗಾಗಿ ಏಕ ಬಳಕೆಯ ಡಯಲೈಸರ್ ಅಳವಡಿಕೆ, ವಾರ್ಷಿಕ 7.20 ಲಕ್ಷ ಸೋಂಕು ರಹಿತ ಡಯಾಲಿಸಿಸ್ ಸೇವೆ ಒದಗಿಸಲು ಏಕಬಳಕೆಯ ಡಯಲೈಸರ್ ಗರ್ಗಳನ್ನು ಅಳವಡಿಸಲಾಗಿದೆ. ಇದರಿಂದ ವಾರ್ಷಿಕ 7.20 ಲಕ್ಷ ಡಯಾಲಿಸಿಸ್ ಸೇವೆಗಳನ್ನು ಒದಗಿಸಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read