ಸರ್ಕಾರದಿಂದ ಸಿಗಲಿದೆಯಾ ಉಚಿತ 239 ರೂಪಾಯಿ ರೀಚಾರ್ಜ್ ? ಇಲ್ಲಿದೆ ವೈರಲ್‌ ಸುದ್ದಿ ಹಿಂದಿನ ಅಸಲಿ ಸತ್ಯ

ಕೇಂದ್ರ ಸರ್ಕಾರದ ಮಾಹಿತಿ ಪ್ರಸರಣದ ಅಂಗವಾದ ಮಾಧ್ಯಮ ಮಾಹಿತಿ ಬ್ಯೂರೋ (ಪಿಐಬಿ) ವಾಟ್ಸಾಪ್‌ನಲ್ಲಿ ಸದ್ದು ಮಾಡುತ್ತಿರುವ ಸುಳ್ಳು ಸುದ್ದಿಯೊಂದರ ಕುರಿತು ಸ್ಪಷ್ಟನೆ ಕೊಟ್ಟಿದೆ.

ಸಂದೇಶದಲ್ಲಿರುವ ’ನೀಲಿ ಬಣ್ಣದ ಲಿಂಕ್’ ಕ್ಲಿಕ್ ಮಾಡುತ್ತಲೇ, ಭಾರತ ಸರ್ಕಾರವು 28 ದಿನಗಳ ಮಟ್ಟಿಗಿನ ವ್ಯಾಲಿಡಿಟಿ ಹೊಂದಿರುವ 239 ರೂ.ಗಳ ರಿಚಾರ್ಜ್ ನಿಮಗಾಗಿ ಮಾಡಲಿದೆ ಎಂದು ತಿಳಿಸುವ ಮೆಸೇಜ್ ಒಂದು ವೈರಲ್ ಆಗಿತ್ತು.

ಈ ಕುರಿತು ಟ್ವೀಟ್ ಮಾಡಿರುವ ಪಿಐಬಿ ಫ್ಯಾಕ್ಟ್‌ ಚೆಕ್ ಹ್ಯಾಂಡಲ್, “#ವಂಚನೆಯ ಅಲರ್ಟ್. ’ಉಚಿತ ಮೊಬೈಲ್ ರೀಚಾರ್ಜ್ ಯೋಜನೆ’ ಅಡಿ ಕೇಂದ್ರ ಸರ್ಕಾರವು 239 ರೂ.ಗಳಿಗೆ 28 ದಿನಗಳ ಕಾಲಾವಧಿಯ ರೀಚಾರ್ಜ್‌ ಅನ್ನು ಎಲ್ಲ ಮೊಬೈಲ್ ಬಳಕೆದಾರರಿಗೆ ನೀಡುತ್ತಿದೆ ಎಂದು ವಾಟ್ಸಾಪ್ ಸಂದೇಶವೊಂದು ತಿಳಿಸುತ್ತಿದೆ. ಈ ಹೇಳಿಕೆ ಸುಳ್ಳಾಗಿದೆ. ಭಾರತ ಸರ್ಕಾರದಿಂದ ಇಂಥ ಯಾವುದೇ ಘೋಷಣೆ ಆಗಿಲ್ಲ,” ಎಂದು ತಿಳಿಸಿದೆ.

https://twitter.com/PIBFactCheck/status/1639906534351142912?ref_src=twsrc%5Etfw%7Ctwcamp%5Etweetembed%7Ctwterm%5E1639906534351142912%7Ctwgr%5Eb3e603ab49c289167820bf9e4421d3a621946614%7Ctwcon%5Es1_&ref_url=https%3A%2F%2Fwww.ndtv.com%2Findia-news%2Ffact-check-government-is-not-offering-a-mobile-recharge-of-rs-239-3894608

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read