ಹಾಸನ : ಮೀಟರ್ ಬಡ್ಡಿದಾರರ ಕಿರುಕುಳಕ್ಕೆ ಸರ್ಕಾರಿ ನೌಕರ ಬಲಿಯಾದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗಿರಿಗದ್ದೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗ್ರಾಮದ ಲಕ್ಕುಂದ ಗ್ರಾಮ ಪಂಚಾಯತ್ ಕಾರ್ಯದರ್ಶಿ ದೇವರಾಜ್ (52) ಎಂದು ಗುರುತಿಸಲಾಗಿದೆ. 50 ಸಾವಿರ ಸಾಲ ಕೊಟ್ಟು ಲಕ್ಷ ಲಕ್ಷ ವಸೂಲಿ ಮಾಡಿ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಹಣ ನೀಡುವಂತೆ ಒತ್ತಾಯಿಸಿ ಇಬ್ಬರು ದೇವರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ. ತಲೆಗೆ ಗಂಭೀರವಾಗಿ ಪೆಟ್ಟಾಗಿ ಕೋಮಾಗೆ ಹೋಗಿದ್ದ ದೇವರಾಜ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಈ ಸಂಬಂಧ ಭಾಸ್ಕರ್ ಹಾಗೂ ಖುಷಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಅರೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.