ನವದೆಹಲಿ: ಭಾರತ್ NCAP(ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಮ್) ಮಾದರಿಯಲ್ಲಿ ಟ್ರಕ್ ಗಳು ಮತ್ತು ಭಾರಿ ವಾಣಿಜ್ಯ ವಾಹನಗಳಿಗೆ ಸುರಕ್ಷತಾ ಮೌಲ್ಯಮಾಪನ ರೇಟಿಂಗ್ ಆರಂಭಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಉದ್ದೇಶಿಸಿದೆ.
ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಮಾರಂಭವೊಂದರಲ್ಲಿ ಮಾತನಾಡಿ, ವಾಹನಗಳು ಹೆಚ್ಚು ಸುರಕ್ಷಿತವಾಗಿರುವಂತೆ ಉತ್ಪಾದನೆ ಮಾಡಲು ಮತ್ತು ತಯಾರಕ ಕಂಪನಿಗಳನ್ನು ಉತ್ತೇಜಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಬ್ಯಾಟರಿ ಚಾಲಿತ ಇ ರಿಕ್ಷಾಗಳಿಗೆ ಸುರಕ್ಷತಾ ಸಮಸ್ಯೆ ಇದ್ದು, ಅವುಗಳಿಗೂ ಸರ್ಕಾರ ಈಗಾಗಲೇ ಮಾನದಂಡಗಳು ಮತ್ತು ಸುರಕ್ಷತಾ ಮೌಲ್ಯಮಾಪನ ವ್ಯವಸ್ಥೆ ರೂಪಿಸುತ್ತಿದೆ. ಇ ರಿಕ್ಷಾಗಳಲ್ಲಿನ ಸುರಕ್ಷತೆ ವಿಷಯ ಸುಧಾರಣೆಯಾದಲ್ಲಿ ಅದರಿಂದ ಗುಣಮಟ್ಟ ಹೆಚ್ಚಾಗುತ್ತದೆ. ಜೊತೆಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ ಎಂದು ತಿಳಿಸಿದ್ದಾರೆ.