ಈ ನಾಲ್ಕು ಊರುಗಳ ಗಂಡುಗಳಿಗೆ ಹೆಣ್ಣುಗಳೇ ಸಿಗುತ್ತಿಲ್ಲ…..! ಕಾರಣ ಗೊತ್ತಾ……?

ಬಿಹಾರದ ಅಭಿವೃದ್ಧಿ ವಿಚಾರವಾಗಿ ರಾಜಕೀಯ ಪಕ್ಷಗಳಲ್ಲಿ ಭಿನ್ನವಾದ ದೃಷ್ಟಿಕೋನಗಳಿರಬಹುದು. ಆದರೆ ಸರ್ಕಾರೀ ದತ್ತಾಂಶಗಳು ತೋರುವ ಪ್ರಕಾರ ರಾಜ್ಯವು ಸಾಮಾಜಿಕ ಸ್ಥಿತಿಗತಿಗಳ ಬಹುತೇಕ ಸೂಚ್ಯಂಕಗಳಲ್ಲಿ ಭಾರೀ ಹಿಂದೆ ಉಳಿದಿದೆ. ವಿದ್ಯುತ್‌ ಅಥವಾ ದೂರವಾಣಿ ಸಂಪರ್ಕಗಳು, ಕೈಗಾರಿಕೆ ಹಾಗೂ ರಸ್ತೆಗಳು ಸೇರಿದಂತೆ ಅನೇಕ ವಿಚಾರಗಳಲ್ಲಿ ಹಿಂದುಳಿದಿರುವುದು ಬಿಹಾರದ ಜನತೆಯ ವೈಯಕ್ತಿಕ ಹಾಗೂ ವೃತ್ತಿಪರ ಬದುಕುಗಳ ಮೇಲೂ ದುಷ್ಪರಿಣಾಮ ಬೀರುವಂತೆ ಮಾಡಿದೆ.

ರಾಜ್ಯದ ಲಾಖಿಸಾರಾಯ್, ಪಥುವಾ, ಕನ್ಹಾಯ್ಪುರ, ಪಿಪಾರಿಯಾ ದಿಗ್ ಮತ್ತು ಬಸೌನಾ ಎಂಬ ಗ್ರಾಮಗಳಲ್ಲಿ ಸ್ವಾತಂತ್ರ‍್ಯ ಬಂದಾಗಿನಿಂದ ಇಂದಿಗೂ ರಸ್ತೆಗಳನ್ನೇ ಹಾಕಿಲ್ಲ! ಅಭಿವೃದ್ಧಿ ವಿಚಾರದಲ್ಲಿ ಈ ಮಟ್ಟದಲ್ಲಿ ಹಿಂದುಳಿದ ಕಾರಣ ಈ ಊರುಗಳ ಜನಜೀವನಗಳಲ್ಲೂ ಅನೇಕ ಅಡಚಣೆಗಳುಂಟಾಗಿವೆ. ಅನ್ಯ ಊರುಗಳ ಜನರು ತಮ್ಮ ಹೆಣ್ಣುಮಕ್ಕಳನ್ನು ಈ ಊರುಗಳಿಗೆ ಮದುವೆ ಮಾಡಿಕೊಡಲು ಹಿಂದೇಟು ಹಾಕುತ್ತಾರೆ. ಈ ಕಾರಣದಿಂದಲೇ ಈ ಊರುಗಳಲ್ಲಿ ದೊಡ್ಡ ಸಂಖ್ಯೆಯ ಪುರುಷರು ಅವಿವಾಹಿತರಾಗೇ ಉಳಿದಿದ್ದಾರೆ. ಇಷ್ಟು ಮಾತ್ರವಲ್ಲದೇ ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಆಸ್ಪತ್ರೆಗಳಿಗೆ ಜನರನ್ನು ರವಾನೆ ಮಾಡುವುದೂ ಸಹ ಈ ಊರುಗಳಲ್ಲಿ ದುಸ್ತರವಾಗಿದೆ.

ರಸ್ತೆಗಳೇ ಇಲ್ಲದ ಕಾರಣ ಈ ಊರಿಗೆ ಯಾವುದೇ ರೀತಿಯ ಸಾರಿಗೆ ಸಂಪರ್ಕ ಕಷ್ಯಾಸಾಧ್ಯವಾಗಿದೆ. ಸಂಸದರು, ಶಾಸಕರು, ಮುಖ್ಯಮಂತ್ರಿಗಳ ಜೊತೆಗೆಲ್ಲಾ ಈ ಸಮಸ್ಯೆ ಕುರಿತು ಮಾತನಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read