ಪರಿಸರ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ ʼಗೊರೂರು ಜಲಾಶಯʼ

ಹಾಸನ ಅಂದಕೂಡಲೇ ನಿಮಗೆ ಏನು ನೆನಪಾಗುತ್ತೆ..? ಸಕಲೇಶಪುರ, ಬಿಸಿಲೆ ಘಾಟ್​, ಹಾಸನಾಂಬ ದೇವಾಲಯ ಅಲ್ಲವೇ..? ಆದರೆ ಎಂದಾದರೂ ಹಾಸನಕ್ಕೆ ಹೋದ ವೇಳೆ ಗೊರೂರು ಅಣೆಕಟ್ಟಿನ ಕಡೆ ಮುಖ ಮಾಡಿದ್ದೀರೇ,.? ಮಾಡಿಲ್ಲ ಅಂದರೆ ಈ ಸ್ಥಳವನ್ನೂ ನಿಮ್ಮ ಲಿಸ್ಟ್​ಗೆ ಸೇರಿಸಿಕೊಂಡು ಬಿಡಿ.

ಜೀವ ನದಿ ಕಾವೇರಿಯ ಉಪನದಿಗಳಲ್ಲಿ ಹೇಮಾವತಿ ನದಿ ಕೂಡ ಒಂದು. ಈ ನದಿಗೆ ಹಾಸನ ಜಿಲ್ಲೆಯ ಗೂರೂರಿನಲ್ಲಿ ಕಟ್ಟಲಾಗಿರುವ ಅಣೆಕಟ್ಟೆಯೇ ಗೊರೂರು – ಹೇಮಾವತಿ ಜಲಾಶಯ. ಮಳೆಗಾಲದಲ್ಲಂತೂ ಈ ಅಣೆಕಟ್ಟಿನ ಸೌಂದರ್ಯವನ್ನ ನೋಡೋದೇ ಒಂದು ಮಜಾ.

ಮಳೆಗಾಲದ ಸಂದರ್ಭದಲ್ಲಿ ಎಲ್ಲಾ ಕ್ರೆಸ್ಟ್​ ಗೇಟ್​ಗಳಿಂದ ನೀರನ್ನ ಬಿಡಲಾಗುತ್ತೆ. ಅದನ್ನ ಕಣ್ತುಂಬಿಕೊಳ್ಳೋದೇ ಮಹದಾನಂದ. ಈ ಜಲಾಶಯ ಹಾಸನ ಪಟ್ಟಣದಿಂದ ಕೇವಲ 24 ಕಿಲೋಮೀಟರ್​ ದೂರದಲ್ಲಿದೆ. ಸಾಧ್ಯವಾದರೆ ಮಳೆಗಾಲದ ಸಂದರ್ಭದಲ್ಲಿ ಈ ಅಣೆಕಟ್ಟಿಗೆ ಒಮ್ಮೆ ಭೇಟಿ​ ಕೊಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read