BIG NEWS: ಗೂಗಲ್ ನಿಂದ 12,000 ಉದ್ಯೋಗ ಕಡಿತದ ಬಗ್ಗೆ ಸುಂದರ್ ಪಿಚೈ ಮಹತ್ವದ ಹೇಳಿಕೆ

ನವದೆಹಲಿ: ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಗೂಗಲ್‌ ನಿಂದ  12,000 ಉದ್ಯೋಗ ಕಡಿತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುಂದರ್ ಪಿಚೈ ತಿಳಿಸಿದ್ದಾರೆ.

ಕಳೆದ ಮಂಗಳವಾರ(ಡಿಸೆಂಬರ್ 12) ನಡೆದ Google ನ ಸರ್ವಾಂಗೀಣ ಸಭೆಯಲ್ಲಿ ಸುಂದರ್ ಪಿಚೈ ಸುಮಾರು 12,000 ಉದ್ಯೋಗಿಗಳನ್ನು(ಇದು ಕಂಪನಿಯ ಉದ್ಯೋಗಿಗಳ 6% ಆಗಿದೆ) ವಜಾಗೊಳಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಗೂಗಲ್ ವಜಾಗೊಳಿಸುವಿಕೆಯನ್ನು ಹೆಚ್ಚು ಉತ್ತಮ ರೀತಿಯಲ್ಲಿ ನಿರ್ವಹಿಸಬಹುದಿತ್ತು ಎಂದು ಪಿಚೈ ಒಪ್ಪಿಕೊಂಡರು. ಆದರೆ, ಸಾಕಷ್ಟು ಚರ್ಚೆ ಮತ್ತು ಚಿಂತನೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಮತ್ತು ಭವಿಷ್ಯದ ಬೆಳವಣಿಗೆಗೆ ತನ್ನನ್ನು ತಾನು ಹೊಂದಿಸಿಕೊಳ್ಳಲು 12,000 ಉದ್ಯೋಗ ಕಡಿತದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಿಚೈ ವಿವರಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read