ಆಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳಲ್ಲಿ ಭೂಕಂಪ ಪತ್ತೆ ವ್ಯವಸ್ಥೆ ಪರಿಚಯಿಸಿದ ಗೂಗಲ್​

ತಂತ್ರಜ್ಞಾನ ದೈತ್ಯ ಗೂಗಲ್​ ಭೂಕಂಪದಿಂದ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯನ್ನು ಆರಂಭಿಸಿದೆ. ಇದು ಆಂಡ್ರಾಯ್ಡ್​ ಸ್ಮಾರ್ಟ್​ಫೋನ್​ ಹೊಂದಿರುವ ಜನರಿಗೆ ಭೂಕಂಪದ ಅಪಾಯದಿಂದ ಪಾರಾಗಲು ಸಹಾಯ ಮಾಡುತ್ತದೆ.

ಭೂಕಂಪ ಪ್ರಪಂಚದ ಸರ್ವೇ ಸಾಮಾನ್ಯವಾದ ನೈಸರ್ಗಿಕ ವಿಕೋಪಗಳ ಪೈಕಿ ಒಂದಾಗಿದೆ. ಇದರಿಂದ ಅನೇಕರು ಪ್ರಾಣ ತೆತ್ತ ಉದಾಹರಣೆಗಳಿವೆ. ಆದರೆ ಗೂಗಲ್​ನ ಈ ಹೊಸ ವ್ಯವಸ್ಥೆಯಿಂದಾಗಿ ನಾವು ನಮ್ಮ ಪ್ರೀತಿ ಪಾತ್ರರನ್ನು ಭೂಕಂಪದ ಅಪಾಯದಿಂದ ಬಚಾವು ಮಾಡಿಕೊಳ್ಳಬಹುದಾಗಿದೆ.

ಭಾರತದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಜೊತೆಯಲ್ಲಿ ಸಮಾಲೋಚನೆ ನಡೆಸಿದ ಬಳಿಕ ಈ ಭೂಕಂಪ ವ್ಯವಸ್ಥೆಯನ್ನು ಪತ್ತೆ ಮಾಡುವ ಸೆನ್ಸಾರ್​ಗಳನ್ನು ಆಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳಲ್ಲಿ ಪರಿಚಯಿಸಲಾಗಿದೆ. ಪ್ರತಿಯೊಂದು ಆಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳು ಚಿಕ್ಕದಾದ ಅಕ್ಸೆಲೆರೋಮೀಟರ್​​ಗಳನ್ನ ಹೊಂದಿದ್ದು ಇವುಗಳು ಮಿನಿ ಸೀಸ್ಮೀಮೀಟರ್​ಗಳಾಗಿ ಕಾರ್ಯ ನಿರ್ವಹಿಸುತ್ತದೆ. ಫೋನ್​​ನ್ನು ಪ್ಲಗ್​​ ಇನ್​ ಮಾಡಿದಾಗ ಹಾಗೂ ಜಾರ್ಜ್​ ಮಾಡಿದಾಗ ಅದು ಭೂಕಂಪದ ಸಾಧ್ಯಾಸಾಧ್ಯತೆಗಳನ್ನು ಪತ್ತೆ ಮಾಡುತ್ತದೆ.

ಅನೇಕ ಸ್ಮಾರ್ಟ್​ಫೋನ್​ಗಳು ಒಂದೇ ಬಾರಿಗೆ ಭೂಕಂಪದ ಅನುಭವ ಪತ್ತೆ ಮಾಡಿದರೆ ಭೂಕಂಪ ಆ ಸ್ಥಳದಲ್ಲಿ ಸಂಭವಿಸಬಹುದು ಎಂದು ಅಂದಾಜಿಸಬಹುದಾಗಿದೆ. ಆಗ ನಾವು ಕೂಡಲೇ ಅಪಾಯದಿಂದ ಪಾರಾಗಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read