ಬೆಂಗಳೂರು : ಖಾಯಂ ಪೌರಕಾರ್ಮಿಕರಿಗೆ ತಿಂಗಳಿಗೆ ₹39,000 ವೇತನ, ನಿವೃತ್ತಿ ವೇಳೆ ₹10 ಲಕ್ಷ ಇಡುಗಂಟು ಸಿಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಖಾಯಂ ನೇಮಕಾತಿ ಸೌಲಭ್ಯ ಪಡೆದಿರುವ 12,692 ಪೌರಕಾರ್ಮಿಕರಿಗೆ ಇನ್ನು ಮುಂದೆ ತಿಂಗಳಿಗೆ ₹39,000 ವೇತನ, ನಿವೃತ್ತಿ ವೇಳೆ ₹10 ಲಕ್ಷ ಇಡುಗಂಟು ಹಾಗೂ ₹6 ಸಾವಿರ ಪಿಂಚಣಿ ಸಿಗಲಿದೆ. ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ʼಡಿʼ ದರ್ಜೆ ನೌಕರರಿಗೆ ಸಿಗುವ ಎಲ್ಲಾ ಸವಲತ್ತುಗಳು ಪೌರಕಾರ್ಮಿಕರಿಗೂ ಸಿಗಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

You Might Also Like
TAGGED:ಖಾಯಂ ಪೌರಕಾರ್ಮಿಕ