ನವದೆಹಲಿ: ಕೇಂದ್ರದ ಸರ್ಕಾರದ ಅಗ್ನಿಪಥ್ ನೇಮಕಾತಿ ಯೋಜನೆಯಡಿ ನೇಮಕವಾದ ಅಗ್ನಿವೀರರಿಗೆ ವಿಶೇಷ ವೈಯಕ್ತಿಕ ಸಾಲ ಯೋಜನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ.) ಘೋಷಿಸಿದೆ.
ಈ ಯೋಜನೆಯಡಿ ಎಸ್.ಬಿ.ಐ.ನಲ್ಲಿ ವೇತನ ಖಾತೆ ಹೊಂದಿರುವ ಅಗ್ನಿವೀರರು ಯಾವುದೇ ಭದ್ರತೆ(ಅಡಮಾನ) ಇಲ್ಲದೆ, ಸಂಸ್ಕರಣಾ ಶುಲ್ಕವಿಲ್ಲದೆ 4 ಲಕ್ಷ ರೂ. ಸಾಲ ಪಡೆಯಬಹುದು. ಮರುಪಾವತಿ ಅವಧಿಯನ್ನು ಅಗ್ನಿಪಥ್ ಯೋಜನೆಯ ಅವಧಿಯೊಂದಿಗೆ ಹೊಂದಾಣಿಕೆ ಮಾಡಲಾಗಿದೆ.
ದೇಶದ ರಕ್ಷಣೆಗಾಗಿ ಶ್ರಮಿಸುತ್ತಿರುವ ಅಗ್ನಿವೀರರಿಗಾಗಿ 79 ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ವಿಶೇಷ ವೈಯಕ್ತಿಕ ಸಾಲದ ಹೊಸ ಯೋಜನೆಯನ್ನು ಆರಂಭಿಸಲಾಗಿದೆ. ಸೆಪ್ಟೆಂಬರ್ 30ರವರೆಗೆ ಎಲ್ಲಾ ರಕ್ಷಣಾ ಸಿಬ್ಬಂದಿಗೆ ಶೇಕಡ 10.50 ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಎಂದು ಹೇಳಲಾಗಿದೆ.