ಶುಭ ಸುದ್ದಿ…! ಮೆಟ್ರೋ ರೈಲು ಪ್ರಯಾಣ ದರದಲ್ಲಿ ಶೇ. 25 ರಷ್ಟು ರಿಯಾಯಿತಿ ಘೋಷಿಸಿದ ಮಹಾರಾಷ್ಟ್ರ ಸಿಎಂ ಶಿಂಧೆ

ಮುಂಬೈ: ಮುಖ್ಯಮಂತ್ರಿ ಏಕನಾಥ್ ಶಿಂಧೆ ಶನಿವಾರ ಮುಂಬೈ ಮೆಟ್ರೋ ರೈಲುಗಳ ಪ್ರಯಾಣ ದರದಲ್ಲಿ ಶೇಕಡ 25 ರಷ್ಟು ರಿಯಾಯಿತಿ ಘೋಷಿಸಿದ್ದಾರೆ.

65 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು, ದೈಹಿಕ ವಿಕಲಚೇತನರು ಮತ್ತು 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಮೇ 1 ರಿಂದ ರಿಯಾಯಿತಿಯಲ್ಲಿ ಮೆಟ್ರೋ ಲೈನ್ 2A ಮತ್ತು 7 ರಲ್ಲಿ ಪ್ರಯಾಣಿಸಬಹುದು. ಮೇ 1 ಮಹಾರಾಷ್ಟ್ರ ದಿನವಾಗಿ ಆಚರಿಸಲಾಗುತ್ತದೆ. ಈ ದಿನದ ಅಂಗವಾಗಿ ರಿಯಾಯಿತಿ ಘೋಷಿಸಲಾಗಿದೆ.

ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್(ಮುಂಬೈ ಒನ್) ಹೊಂದಿರುವ ಸಾವಿರಾರು ಜನರಿಗೆ ಈ ಪ್ರಯೋಜನವನ್ನು ವಿಸ್ತರಿಸಲಾಗುವುದು. 45 ಅಥವಾ 60 ಟ್ರಿಪ್‌ ಗಳಿಗೆ ಮುಂಬೈ ಒನ್ ಪಾಸ್‌ ಗಳಲ್ಲಿ ಮಾತ್ರ ರಿಯಾಯಿತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read