ಬೆಂಗಳೂರು: ರಾಜ್ಯದಲ್ಲಿ AB-ArK ಯೋಜನೆಯವನ್ನು ಸುಗಮವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕ್ರಮವಹಿಸಲು ಅಧಿಕಾರ ಪ್ರತ್ಯಾಯೋಜಿಸಿರುವ ಕುರಿತಂತೆ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ Ab-Ark ಯೋಜನೆಯ ಅನುಷ್ಠಾನವನ್ನು ಸುಗಮವಾಗಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಈ ಕೆಳಕಂಡಂತೆ ಕ್ರಮವಹಿಸಲು ಅಧಿಕಾರ ಪ್ರತ್ಯಾಯೋಜಿಸಲಾಗಿದೆ.
1. ಯಾವುದೇ ಮಿತಿಯಿಲ್ಲದೆ ಅನಗತ್ಯ ಕಾರ್ಯವಿಧಾನಗಳನ್ನು ತೆಗೆದುಹಾಕಲು (Delete any unwanted procedures without any limit.).
2. 5 ಲಕ್ಷ ರೂ.ವರೆಗಿನ ಯಾವುದೇ ಹೊಸ ಅಪೇಕ್ಷಣೀಯ ಚಿಕಿತ್ಸಾ ಕಾರ್ಯವಿಧಾನಗಳನ್ನು ಸೇರಿಸುವುದು ಅಥವಾ ಅಸ್ತಿತ್ವದಲ್ಲಿರುವ ಚಿಕಿತ್ಸಾ ಕಾರ್ಯವಿಧಾನಗಳನ್ನು ಮಾರ್ಪಡಿಸುವುದು ಈ ಕೆಳಗಿನವುಗಳಿಗೆ ಒಳಪಟ್ಟಿರುತ್ತದೆ (Add any new desirable procedures up to Rs.5.00 lakh or modify an existing procedure, subject to the following):
I. ಅಂತಹ ಚಿಕಿತ್ಸಾ ಕಾರ್ಯವಿಧಾನಗಳ ಒಟ್ಟು ವೆಚ್ಚವು ಒಟ್ಟು ವಾರ್ಷಿಕ ಬಜೆಟ್ 5% (The total cost of such procedures should not exceed 5% of the total annual budget.)
ii. ಅಂತಹ ಚಿಕಿತ್ಸಾ ಕಾರ್ಯವಿಧಾನಗಳಿಗೆ ಅನುದಾನವನ್ನು ಯೋಜನೆಯಲ್ಲಿನ ಉಳಿತಾಯದಿಂದ ಭರಿಸತಕ್ಕದ್ದು (The funding for such procedures should be met out of savings in the scheme.)
iii. ಹೊಸ ಚಿಕಿತ್ಸಾ ಕಾರ್ಯವಿಧಾನಗಳ ವೆಚ್ಚದ ಪ್ರಸ್ತಾವನೆಯನ್ನು SASTನ ತಾಂತ್ರಿಕ ಸಮಿತಿಯ ಪರಿಶೀಲನೆ ನಂತರ SASTನ ಪ್ರಮಾಣಿತ ಕಾರ್ಯವಿಧಾನದ (SOP) ಪ್ರಕಾರ ជ (The costing of new procedures should be approved as per standard operating procedure in SAST, wherein the technical committee should vet the proposal)
Ab-ark ಯೋಜನೆಗೆ ಸಂಬಂಧಿಸಿದ ಚಿಕಿತ್ಸಾ ವಿಧಾನಗಳನ್ನು ಸೇರಿಸುವ/ ತೆಗೆದುಹಾಕುವ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಮೇಲಿನಂತೆ ಪರಿಶೀಲಿಸಿ ಕ್ರಮವಹಿಸತಕ್ಕದ್ದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ: FD 744 EXP-5/2022, ದಿನಾಂಕ: 07.08.2025 ನೀಡಿರುವ ಸಹಮತಿ ಅನ್ವಯ ಹೊರಡಿಸಲಾಗಿದೆ.
