ಬೆಂಗಳೂರು : ಏಪ್ರಿಲ್-2024ರ ಮಾಹೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲಾವಾರು ಮತ್ತು ವಲಯವಾರು ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಪ್ರೌಢ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿ ಉಚಿತ ಲ್ಯಾಪ್ಟಾಪ್ ವಿತರಿಸುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಏಪ್ರಿಲ್-2024 ಮಾಹೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 35 ಶೈಕ್ಷಣಿಕ ಜಿಲ್ಲೆಗಳ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಪಡೆದ ಪ್ರತಿ ಜಿಲ್ಲೆಯ ಮೂರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿ ಲ್ಯಾಪ್ಟಾಪ್ ವಿತರಿಸಲಾಗುತ್ತಿದ್ದು, 2024ನೇ ಸಾಲಿಗೆ ಜಿಲ್ಲಾವಾರು 115 ಮತ್ತು ಬ್ಲಾಕ್ವಾರು 641 ಒಳಗೊಂಡಂತೆ ಒಟ್ಟಾರೆಯಾಗಿ 756 ಫಲಾನುಭವಿಗಳಿಗೆ ಲ್ಯಾಪ್ಟಾಪ್ ವಿತರಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಕೈಗೊಂಡು ಸರಬರಾಜುದಾರರನ್ನು ಗುರುತಿಸಲಾಗಿದ್ದು, ಈ ಸಂಬಂಧ ರೂ.3.25,16,940/-ಗಳ ಅನುದಾನದ ಅಗತ್ಯವಿದ್ದು, ಈಗಾಗಲೇ ನಿಗದಿಪಡಿಸಲಾದ ರೂ.280.00 ಲಕ್ಷಗಳ ಎದುರಾಗಿ ರೂ.80.00 ಲಕ್ಷಗಳ ಅನುದಾನ ಒದಗಿಸಲಾಗಿದ್ದು, ಉಳಿಕೆ ರೂ.200.00 ಲಕ್ಷಗಳನ್ನು ಲೆಕ್ಕ ಶೀರ್ಷಿಕೆ:2202-01-109-0-10 ಯ ಉಪಶೀರ್ಷಿಕೆ:059 ಅಡಿಯಲ್ಲಿ ಬಿಡುಗಡೆಗೊಳಿಸುವಂತೆ ಹಾಗೂ ಉಳಿಕೆ ಅನುದಾನಕ್ಕಾಗಿ ಕೆ.ಎಸ್.ಕ್ಯೂ.ಎ.ಎ.ಸಿ ವಿಭಾಗದಲ್ಲಿ ಉಳಿಕೆಯಿರುವ ರೂ.9.30 ಲಕ್ಷಗಳನ್ನು ಹಾಗೂ ಮಂಡಲಿಯ ಅನುದಾನ ರೂ.35.86,940/- ಗಳನ್ನು ಭರಿಸಲು ಅನುಮತಿ ನೀಡುವಂತೆ ಕೋರಿರುತ್ತಾರೆ.
ಮೇಲೆ ಓದಲಾದ ಕ್ರಮಾಂಕ (2) ರ ಸರ್ಕಾರದ ಆದೇಶದಲ್ಲಿ, 2024-25ನೇ ಸಾಲಿನ ಮುಂದುವರಿಕೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅನುಮತಿ ನೀಡಲಾಗಿದ್ದು, ಸದರಿ ಆದೇಶದಲ್ಲಿ 2024-25ನೇ ಸಾಲಿನ ಆಯವ್ಯಯದ ‘ಗುಣಮಟ್ಟ ಭರವಸೆ ಮತ್ತು ವಿದ್ಯಾರ್ಥಿ ಪ್ರೇರಣಾ ಉಪಕ್ರಮಗಳು’ ಕಾರ್ಯಕ್ರಮದ ಲೆಕ್ಕ ಶೀರ್ಷಿಕೆ:2202-01-109-0-107-059 (ಇತರೆ ವೆಚ್ಚಗಳು) ರಡಿ ನಿಗದಿಯಾಗಿರುವ ರೂ800.00 ಲಕ್ಷಗಳಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪ್ರೋತ್ಸಾಹದಾಯಕವಾಗಿ ಲ್ಯಾಪ್ಟಾಪ್ ವಿತರಿಸಲು ರೂ.280.00 ಲಕ್ಷಗಳನ್ನು ಹಂಚಿಕೆ ಮಾಡಲಾಗಿರುತ್ತದೆ. ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಏಪ್ರಿಲ್-2024ರ ಮಾಹೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಪಡೆದ ಪ್ರತಿ ಜಿಲ್ಲೆಯ ಮೂರು ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು 204 ವಲಯ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿ ವಲಯದ ಮೂರು ವಿದ್ಯಾರ್ಥಿಗಳು ಒಳಗೊಂಡಂತೆ ಒಟ್ಟು 756 ಫಲಾನುಭವಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿ ಉಚಿತ ಲ್ಯಾಪ್ಟಾಪ್ ವಿತರಿಸಲು ಆಗತ್ಯವಿರುವ ರೂ. 3,25,16,940/-ಗಳ ಪೈಕಿ, 2024-25ನೇ ಸಾಲಿನ ಆಯವ್ಯಯದ ‘ಗುಣಮಟ್ಟ ಭರವಸೆ ಮತ್ತು ವಿದ್ಯಾರ್ಥಿ ಪ್ರೇರಣಾ ಉಪಕ್ರಮಗಳು’ ಕಾರ್ಯಕ್ರಮದ ಲೆಕ್ಕ ಶೀರ್ಷಿಕೆ:2202-01-109-0-107-059 (ಇತರೆ ವೆಚ್ಚಗಳು) ರಡಿ ನಿಗದಿಯಾಗಿರುವ ರೂ.280.00 ಲಕ್ಷಗಳು ಹಾಗೂ ಕೆ.ಎಸ್.ಕ್ಯೂ.ಎ.ಎ.ಸಿ ವಿಭಾಗದಲ್ಲಿ ಉಳಿಕೆಯಿರುವ ರೂ.9.30 ಲಕ್ಷಗಳನ್ನು ಹಾಗೂ ಮಂಡಲಿಯಲ್ಲಿ ಲಭ್ಯವಿರುವ ರೂ.35,86,940/- ಗಳನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಬೆಂಗಳೂರು, ಇವರು ನಿಯಮಾನುಸಾರ ಭರಿಸತಕ್ಕದ್ದು.
ಷರತ್ತುಗಳು:
- ಮೇಲ್ಕಂಡಂತೆ ಒದಗಿಸಲಾದ ಅನುದಾನದಲ್ಲಿ ನಿಯಮಾನುಸಾರ ಅರ್ಹ ಪ್ರತಿಭಾವಂತ ಫಲಾನುಭವಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳನ್ನು ವಿತರಿಸಲು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಬೆಂಗಳೂರು, ಇವರು ಕ್ರಮವಹಿಸತಕ್ಕದ್ದು.
- ಜಿಲ್ಲಾಮಟ್ಟದಲ್ಲಿ ಅತಿ ಹೆಚ್ಚು ಅಂಕಗಳಿಸಿ ಪ್ರೋತ್ಸಾಹಕವಾಗಿ ಲ್ಯಾಪ್ಟಾಪ್ ಪಡೆದಂತಹ ವಿದ್ಯಾರ್ಥಿಗಳನ್ನು ಮತ್ತೊಮ್ಮೆ ವಲಯ ಮಟ್ಟಕ್ಕೆ ಪರಿಗಣಿಸಿರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
- ಬಿಡುಗಡೆಯಾದ ಅನುದಾನಕ್ಕೆ ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಬೆಂಗಳೂರು ಇವರು ನಿಯಮಾನುಸಾರ ಲೆಕ್ಕ ಪತ್ರಗಳನ್ನು ಇಡತಕ್ಕದ್ದು.
- ಎಲ್ಲಾ ಅರ್ಹ ಫಲಾನುಭವಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳನ್ನು ಶೀಘ್ರವಾಗಿ ವಿತರಿಸತಕ್ಕದ್ದು ಹಾಗೂ ವಿತರಣೆ ಪೂರ್ಣಗೊಂಡ ನಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
- ಫಲಾನುಭವಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲು ಹೊರಡಿಸಲಾದ ಕಛೇರಿ ಜ್ಞಾಪನವನ್ನು ಹಾಗೂ ಸದರಿ ಸರ್ಕಾರಿ ಆದೇಶವನ್ನು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಹಾಗೂ ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಬೆಂಗಳೂರು ಈ ಕಛೇರಿಯ ವೆಬ್ಸೈಟ್ಗಳಲ್ಲಿ ಕಡ್ಡಾಯವಾಗಿ ಪ್ರಕಟಿಸತಕ್ಕದ್ದು.
- ಖರೀದಿ ಪ್ರಕ್ರಿಯೆಯಲ್ಲಿ ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ ಅಧಿನಿಯಮ-1999 ರ ನಿಯಮಗಳು ಮತ್ತು ತತ್ಸಂಬಂಧ ಕಾಲಕಾಲಕ್ಕೆ ಹೊರಡಿಸಲಾದ/ಹೊರಡಿಸಲಾಗುವ ಆದೇಶ/ಸುತ್ತೋಲೆಗಳ ಸೂಚನೆಗಳನ್ನು ಹಾಗೂ ಲ್ಯಾಪ್ ಟಾಪ್ ಖರೀದಿ ಇ-ಟೆಂಡರ್ ಪ್ರಕ್ರಿಯೆಯ ದಸ್ತಾವೇಜಿನಲ್ಲಿ ನಿಗದಿಪಡಿಲಾಗಿರುವ ಪ್ರಚಲಿತ ನಿಯಮಗಳನ್ನು ಮತ್ತು ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸುಗಳನ್ನು ಚಾಚೂ ತಪ್ಪದೆ ಪಾಲಿಸತಕ್ಕದ್ದು.


