ಹೆಣ್ಣು ಮಕ್ಕಳಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಶಿಕ್ಷಣದ ಜೊತೆಗೆ ಉದ್ಯೋಗ ತರಬೇತಿ

ನವದೆಹಲಿ: 14 ರಿಂದ 18 ವರ್ಷ ವಯೋಮಿತಿಯ ಹೆಣ್ಣು ಮಕ್ಕಳಿಗೆ ಸಾಂಪ್ರದಾಯಿಕ ಹುದ್ದೆಗಳ ತರಬೇತಿ ನೀಡುವ ಕುರಿತು ಪ್ರಾಯೋಗಿಕ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

ದೇಶದಲ್ಲಿ ದುಡಿಯುವ ವರ್ಗದ ಮಹಿಳೆಯರ ಸಂಖ್ಯೆ ಹೆಚ್ಚಳದ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಸಾಂಪ್ರದಾಯಿಕವಲ್ಲದ ಹುದ್ದೆಗಳ ಬಗ್ಗೆ ಹೆಣ್ಣು ಮಕ್ಕಳಿಗೆ ತರಬೇತಿ ನೀಡಲಾಗುವುದು. ಶಿಕ್ಷಣದೊಂದಿಗೆ ಡಿಜಿಟಲ್ ಕೌಶಲ್ಯ, ಡಿಜಿಟಲ್ ಮಾರ್ಕೆಟಿಂಗ್. ಸಾಮಾನ್ಯ ವ್ಯಕ್ತಿತ್ವ ಕುರಿತಾದ ತರಬೇತಿ ನೀಡಲಾಗುವುದು.

ದುಡಿಯುವ ವಲಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಳ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ರೂಪಿಸಲಾದ ಈ ವಿಶೇಷ ಯೋಜನೆಯಡಿ ಸಮೀಪದ ಶಾಲೆಗಳು, ಮನೆಗಳಲ್ಲಿಯೇ ಸಾಂಪ್ರದಾಯಿಕವಲ್ಲದ ಹುದ್ದೆಗಳ ಬಗ್ಗೆ ತರಬೇತಿ ನೀಡಲಾಗುವುದು ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read