JOB ALERT : ಉದ್ಯೋಗಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ; ಪುರುಷ ನರ್ಸ್ ಗಳಿಗೆ ವಿದೇಶದಲ್ಲಿ ಉದ್ಯೋಗವಕಾಶ.!

ಬೆಂಗಳೂರು : ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಯುನೈಟೆಡ್ ಅರಬ್ ಎಮಿರೈಟ್ಸ್ (ಯುಎಈ)ನಲ್ಲಿ ಪುರುಷ ನರ್ಸ್ಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಬಿಎಸ್ಸಿ ನರ್ಸಿಂಗ್, ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ಈ ಉದ್ಯೋಗ ಅವಕಾಶವನ್ನು ಒದಗಿಸಲಿದೆ.

ನರ್ಸಿಂಗ್ ಕೋರ್ಸ್ ಮಾಡಿದ್ದರೆ ವಿದೇಶದಲ್ಲಿ ಉದ್ಯೋಗಾವಕಾಶದ ಕನಸು ನನಸಾಗಬಹುದು. ಯುಎಇನಲ್ಲಿ ನರ್ಸಿಂಗ್ ಉದ್ಯೋಗಕ್ಕೆ ಕರ್ನಾಟಕ ಸರ್ಕಾರದಿಂದಲೇ ಉಚಿತ ನೆರವು ಲಭ್ಯವಿದೆ.  ಯುಎಈನಲ್ಲಿ ಪುರುಷ ನರ್ಸಿಂಗ್ ಹುದ್ದೆ ಬಯಸುವವರು 40 ವರ್ಷದೊಳಗಿನವರಾಗಿರಬೇಕು. 2 ವರ್ಷ ಅನುಭವ ಹೊಂದಿರಲೇಬೇಕು. ಆಯ್ಕೆಯಾಗುವವರಿಗೆ 5000 ಎಇಡಿ(ಮಾಸಿಕ 1,11,000. ರೂ ವೇತನ), 30 ದಿನ ವೇತನ ರಹಿತ ಸಂಬಳ, ಕಂಪನಿ ವತಿಯಿಂದಲೇ ವೈದ್ಯಕೀಯ ವಿಮೆ, ಸಾರಿಗೆ ಮತ್ತು ವಿಮಾನಯಾನ ಟಿಕೆಟ್, ಆಹಾರ ಸೌಲಭ್ಯ, ವೀಸಾ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಯ್ಕೆಯಾದವರಿಗೆ ಮಾಸಿಕ ವೇತನ ನೀಡಲಾಗುತ್ತದೆ, ಹಾಗೂ ಈ ಹುದ್ದೆಗೆ ಆಗಸ್ಟ್ನಲ್ಲಿ ಆನ್ಲೈನ್ ಮೂಲಕ ಸಂದರ್ಶನ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ವಿಳಾಸ : ಇಂಟರ್ನ್ಯಾಷನಲ್ ಮೈಗ್ರೇಶನ್ ಸೆಂಟರ್-ಕರ್ನಾಟಕ (IMC-K), 4ನೇ ಮಹಡಿ, ಕಲ್ಯಾಣ ಸುರಕ್ಷಾ ಭವನ, ಐಟಿಐ ಕಾಲೇಜು ಕ್ಯಾಂಪಸ್, ಡೇರಿ ಸರ್ಕಲ್, ಬನ್ನೇರುಘಟ್ಟ ಮುಖ್ಯ ರಸ್ತೆ, ಬೆಂಗಳೂರು-560029 ಸಂಪರ್ಕಿಸಬಹುದಾಗಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read