ರಾಜ್ಯದ ಮಹಿಳಾ ಪದವೀಧರರಿಗೆ ಗುಡ್ ನ್ಯೂಸ್ : ʻಸ್ವಂತ ಉದ್ಯಮʼ ಆರಂಭಿಸಲು ʻಉದ್ಯಮಶೀಲತಾ ತರಬೇತಿʼಗೆ ಅರ್ಜಿ ಆಹ್ವಾನ

ಬೆಂಗಳೂರು : ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರು ಸ್ವಂತ ಉದ್ಯಮ ಆರಂಭಿಸಲು ಸಹಕಾರಿಯಾಗುವಂತೆ ಐಐಎಂ-ಬೆಂಗಳೂರು ಸಂಸ್ಥೆಯ ಮೂಲಕ ನೀಡಲಾಗುವ ʼಉದ್ಯಮಶೀಲತಾ ತರಬೇತಿʼಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಇದೇ ಜನವರಿ 31ರ ಒಳಗಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ಜಾಲತಾಣ https://swdservices.karnataka.gov.in/ ಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ತರಬೇತಿ :

– ಶೇ.100 ರಷ್ಟು ಕಡ್ಡಾಯ ಹಾಜರಾತಿಯೊಂದಿಗೆ 5-6 ತಿಂಗಳುಗಳ ತರಬೇತಿ

– ತರಬೇತಿ ಸಮಯದಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ

– ತರಬೇತಿ ಪೂರೈಸಿ ಪ್ರಮಾಣಪತ್ರ ಪಡೆದ ಅಭ್ಯರ್ಥಿಗಳಿಗೆ ರೂ.10,000 ಗಳ ಶಿಷ್ಯವೇತನ

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು :

– ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರಾಗಿರಬೇಕು

– 21 ರಿಂದ 45ರ ಒಳಗಿನ ವಯೋಮಾನದವರಾಗಿರಬೇಕು

– ಸ್ವಂತ ಉದ್ದಿಮೆ ಸ್ಥಾಪಿಸುವ ಉದ್ದೇಶ ಹೊಂದಿರಬೇಕು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-01-2024

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read