ಗ್ರಾಮೀಣ ಭಾಗದ ‘ರೈತ ಮಹಿಳೆ’ಯರಿಗೆ ಗುಡ್ ನ್ಯೂಸ್ : ‘ನಾಟಿ ಕೋಳಿ’ ಪಡೆಯಲು ಅರ್ಜಿ ಆಹ್ವಾನ.!

ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ ಮೈಸೂರು ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2024-25 ನೇ ಸಾಲಿನಲ್ಲಿ ಗ್ರಾಮೀಣ ರೈತ ಮಹಿಳೆಯರಿಗೆ ಐದು ವಾರದ ನಾಟಿ ಕೋಳಿ ಮರಿಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಜಿಲ್ಲೆಗೆ 218 (ಪರಿಶಿಷ್ಟ ಜಾತಿ-9, ಪರಿಶಿಷ್ಟ ಪಂಗಂಡ 189, ಸಾಮಾನ್ಯ 20) ಗುರಿ ನಿಗಧಿಯಾಗಿದ್ದು ಆಯ್ಕೆಯಾಗುವ ಪ್ರತಿ ಫಲಾನುಭವಿಗಳಿಗೆ ಐದು ವಾರದ ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು.

ಅರ್ಜಿಯನ್ನು ಭರ್ತಿ ಮಾಡಿ ಡಿಸೆಂಬರ್, 27 ರೊಳಗೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಮಡಿಕೇರಿ 9448647276, ವಿರಾಜಪೇಟೆ 9141093996, ಪೊನ್ನಂಪೇಟೆ 9480669439, ಸೊಮವಾರಪೇಟೆ 9980360200, ಕುಶಾಲನಗರ 9448422269 ಇವರನ್ನು ಸಂಪರ್ಕಿಸಬಹುದು. ಆಸಕ್ತ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read