ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಬೆಂಗಳೂರು ಜಲ ಮಂಡಳಿಯ ಗ್ರಾಹಕರು ಬಾಕಿ ಉಳಿಸಿಕೊಂಡಿರುವ ನೀರಿನ ಶುಲ್ಕದ ಬಡ್ಡಿ ಮತ್ತು ದಂಡವನ್ನು ಶೇ. 100ರಷ್ಟು ಮನ್ನಾ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ನೀರಿನ ಬಾಕಿಯ ಅಸಲು ಹಣವನ್ನು ಪೂರ್ಣ ಪಾವತಿಸಿದಲ್ಲಿ ಮಾತ್ರ ಒಂದು ಬಾರಿಗೆ ಅನ್ವಯವಾಗುವಂತೆ ರಿಯಾಯಿತಿ ಅನ್ವಯವಾಗಲಿದೆ ಎಂದು ಸರ್ಕಾರ ಷರತ್ತು ವಿಧಿಸಲಿದೆ. ನೀರಿನ ಶುಲ್ಕ ಪೂರ್ಣ ಪಾವತಿಸಿದಲ್ಲಿ ಬಡ್ಡಿ, ದಂಡ ಸಂಪೂರ್ಣ ಮನ್ನಾ ಮಾಡಲಾಗುವುದು ಎನ್ನಲಾಗಿದೆ.
