ಬೆಂಗಳೂರು : 25 % ವೇತನ ಹೆಚ್ಚಳ ( Salary Hike ) ಮಾಡುವಂತೆ ಸಾರಿಗೆ ನೌಕರರು ಪಟ್ಟು ಹಿಡಿದಿದ್ದು, ಪ್ರತಿಭಟನೆ ಮಂದಾಗಿದೆ.
ಈ ಹಿನ್ನೆಲೆ ಇಂದು ಸಂಜೆ 5 ಗಂಟೆಗೆ ಸಾರಿಗೆ ನೌಕರರ ಸಂಘಟನೆಗಳ ಜೊತೆ ಸಿಎಂ ಸಿದ್ದರಾಮಯ್ಯ ( CM Siddaramaiah) ಹೈವೋಲ್ಟೇಜ್ ಸಭೆ ನಡೆಸಲಿದ್ದು, ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ಸಿಗುತ್ತಾ ಕಾದುನೋಡಬೇಕಾಗಿದೆ.
ಸಾರಿಗೆ ನೌಕರರು ಪ್ರತಿಭಟನೆ ನಡೆಸಲು ಮುಂದಾಗುತ್ತಿದ್ದಂತೆ ಅಲರ್ಟ್ ಆದ ರಾಜ್ಯ ಸರ್ಕಾರ ಸಾರಿಗೆ ನೌಕರರ ಮನವಿ ಆಲಿಸಿ ಭರವಸೆ ಈಡೇರಿಸಲು ಮುಂದಾಗಿದೆ. ಈ ಹಿನ್ನೆಲೆ ಸಾರಿಗೆ ಸಿಬ್ಬಂದಿ ಸಂಘಟನೆಗಳ ಜೊತೆ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಲಿದ್ದು, ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಸಿಗುತ್ತಾ ಗ್ರೀನ್ ಸಿಗ್ನಲ್ ಎಂಬುದನ್ನು ಕಾದು ನೋಡಬೇಕಾಗಿದೆ. ಇಂದು ಸಭೆ ನಡೆಸಿ ಸಿಎಂ ಸಾರಿಗೆ ನೌಕರರ ಮನವಿ ಆಲಿಸಲಿದ್ದಾರೆ.
You Might Also Like
TAGGED:ಸಾರಿಗೆ ನೌಕರ