ಕುದುರೆಮುಖ ವನ್ಯಜೀವಿ ವಿಭಾಗದ ವಿವಿಧ ಚಾರಣ ಪಥಗಳಲ್ಲಿ ಮೇ 1ರಿಂದ ಅನ್ವಯವಾಗುವಂತೆ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕುದುರೆಮುಖ ವನ್ಯಜೀವಿ ವಿಭಾಗದ ಚಾರಣ ಪಥಗಳಾದ ನೇತ್ರಾವತಿ ಪೀಕ್, ಕುದುರೆಮುಖ ಪೀಕ್, ನರಸಿಂಹ ಪರ್ವತ, ಹಿಡ್ಲುಮನೆ ಫಾಲ್ಸ್, ಕೊಡಚಾದ್ರಿ ಚಾರಣವನ್ನು ಬೇಸಿಗೆ ಬೆಂಕಿ ಕಾಲದ ಕಾರಣದಿಂದ ನಿರ್ಬಂಧಿಸಲಾಗಿತ್ತು. ಪ್ರಸ್ತುತ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಸಾಕಷ್ಟು ಮಳೆಯಾಗಿರುವುದರಿಂದ ಮೇ 1ರಿಂದ ಅನ್ವಯವಾಗುವಂತೆ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದೆ.
aranyavihara.karnataka.gov.in ಮೂಲಕ ಪ್ರವಾಸಿಗರು ಟಿಕೆಟ್ ಕಾಯ್ದಿರಿಸಬಹುದಾಗಿದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.