ಮೈಸೂರಿನಲ್ಲಿ ಅಕ್ಟೋಬರ್ 17ರಂದು ಉದ್ಯೋಗ ಮೇಳ ಆಯೋಜಿಸಲಾಗಿದ್ದು, ವಿವಿಧ ವಿದ್ಯಾರ್ಹತೆ ಹೊಂದಿದವರು ಭಾಗವಹಿಸಬಹುದಾಗಿದೆ.
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಬೆಂಗಳೂರು ವತಿಯಿಂದ ಅ.17 ರಂದು ಮಹಾರಾಜ ಕಾಲೇಜು ಮೈದಾನ, ಮೈಸೂರು ಇಲ್ಲಿ ಕೌಶಲ್ಯದಿಂದ ಉದ್ಯೋಗದ ಕಡೆಗೆ ಯುವ ಸಮೃದ್ಧಿ ಸಮ್ಮೇಳನ – ಮೈಸೂರು ಉದ್ಯೋಗ ಮೇಳವನ್ನು ಬೆಳಿಗ್ಗೆ 09 ಗಂಟೆಯಿAದ ಸಂಜೆ 5 ಗಂಟೆಯವರೆಗೆ ಆಯೋಜಿಸಿದೆ.
ಸದರಿ ಉದ್ಯೋಗ ಮೇಳದಲ್ಲಿ ಎಲ್ಲಾ ವಿದ್ಯಾರ್ಹತೆಯ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಾಲತಾಣ https://udyogamela.ksdckarnataka.com, ಸಹಾಯವಾಣಿ ಸಂಖ್ಯೆ: 9606494308 /906494301 ಮತ್ತು ಜಿಲ್ಲಾ ಕೌಶಲ್ಯಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08172-295340 ಗೆ ಸಂಪರ್ಕಿಸಬಹುದಾಗಿದೆ ಎಂದು ಹಾಸನ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.