ಪ್ರವಾಸಕ್ಕೆ ಹೋಗಬಯಸುವವರಿಗೆ ಗುಡ್ ನ್ಯೂಸ್: ಮಾನ್ಸೂನ್ ಅವಧಿಗೆ ವಿವಿಧ ಮಾದರಿ ಪ್ರವಾಸಗಳ ದರ ಕಡಿತ

ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೊಳಪಟ್ಟು ಪ್ರವಾಸೋದ್ಯಮ ಇಲಾಖೆಯ ಅಂಗಸಂಸ್ಥೆಯಾಗಿದೆ. ಕಳೆದ 53 ವರ್ಷಗಳಿಂದ ಆತಿಥ್ಯ ಕ್ಷೇತ್ರ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯಕ್ಕೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಆತಿಥ್ಯ ಮತ್ತು ಸಾರಿಗೆ ಸೇವೆಯನ್ನು ಒದಗಿಸುತ್ತಾ ಬಂದಿದೆ.

ಮಾನ್ಸೂನ್ ಋತುವಿನ ಹಚ್ಚ ಹಸಿರಿನ ತಾಣಗಳ ಸೌಂದರ್ಯವನ್ನು ಅನುಭವಿಸಲು ಧುಮ್ಮಿಕ್ಕುವ ಜಲಪಾತಗಳ ಮತ್ತು ಮಂಜಿನ ಭೂ ದೃಶ್ಯಗಳೊಂದಿಗೆ ಪ್ರಕೃತಿಯ ರೋಮಾಂಚನಗಳನ್ನು ವೀಕ್ಷಿಸುವ ಸಂಬಂಧ ನಿಗಮವು ರಾಜ್ಯ ಹಾಗೂ ಅಂತರರಾಜ್ಯದ ಪ್ರಸಿದ್ಧ ಜಲಪಾತಗಳನ್ನು ವಿಕ್ಷಿಸಲು ವಿದೇಶ ಪ್ರವಾಸಗಳನ್ನು ಆಯೋಜಿಸುವುದರ ಜೊತೆಗೆ, ಪ್ರಸ್ತುತ ಚಾಲನೆಯಲ್ಲಿರುವ ಎಲ್ಲಾ ಮಾದರಿಯ ವ್ಯವಸ್ಥಿತ ಪ್ರವಾಸಗಳ ದರಗಳನ್ನು 2025ನೇ ಜುಲೈ 14 ರಿಂದ ಅನ್ವಯವಾಗುವಂತೆ ಸರಾಸರಿ ಶೇಕಡ 10 ರಷ್ಟು ದರ ಕಡಿತಗೊಳಿಸಿ ಪರಿಷ್ಕರಿಸಲಾಗಿರುತ್ತದೆ.  ಹಿರಿಯ ನಾಗರಿಕರಿಗೆ ಸಾರಿಗೆಯಲ್ಲಿ ಶೇಕಡ 20% ರಷ್ಟು ರಿಯಾಯಿತಿ ನೀಡಲಾಗಿದೆ.

ಈ ಪ್ರವಾಸಗಳ ಸೇವೆಯನ್ನು ಸದುಪಯೋಗ ಪಡೆಯಲಿಚ್ಛಿಸುವ ಪ್ರವಾಸಿಗರು ನಿಗಮದ ಯಶವಂತಪುರ ಬುಕ್ಕಿಂಗ್ ಕೌಂಟರ್ ಹಾಗೂ ನಿಗಮ ಅಧಿಕೃತ ಟ್ರಾವೆಲ್ ಏಜೆಂಟ್ಗಳ ಮುಖಾಂತರ ಮುಂಗಡ ಬುಕ್ಕಿಂಗ್ ಮಾಡಬಹುದಾಗುದೆ.

ಹೆಚ್ಚಿನ ಮಾಹಿತಿಗಾಗಿ ಕೆ.ಎಸ್.ಟಿ.ಡಿ.ಸಿ. ಜಾಲತಾಣ www.kstdc.co.in ಅಥವಾ ದೂರವಾಣಿ ಸಂಖ್ಯೆ 080-43344334/35, ಮೊಬೈಲ್ ದೂರವಾಣಿ ಸಂಖ್ಯೆ 8970650070, 8970650075 ಮತ್ತು 8970650021 ಸಂಪರ್ಕಿಸಬಹುದಾಗಿದೆ ಎಂದು ಕೆ.ಎಸ್.ಟಿ.ಡಿ.ಸಿ. ಪ್ರಧಾನ ವ್ಯವಸ್ಥಾಪಕರು(ಆಡಳಿತ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read