ʼಓಲಾ ಎಲೆಕ್ಟ್ರಿಕ್ʼ ಸ್ಕೂಟರ್‌ ಖರೀದಿಸಲು ಬಯಸುವವರಿಗೆ ಇಲ್ಲಿದೆ ಗುಡ್‌ ನ್ಯೂಸ್‌ !

ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಓಲಾ, ತನ್ನ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಶ್ರೇಣಿಯ ಮೇಲೆ ಭಾರೀ ರಿಯಾಯಿತಿ ಘೋಷಿಸಿದೆ. ಫೆಬ್ರವರಿ ತಿಂಗಳಲ್ಲಿ ಸ್ಕೂಟರ್‌ ಖರೀದಿ ಮಾಡುವವರಿಗೆ 25,000 ರೂಪಾಯಿವರೆಗೆ ಡಿಸ್ಕೌಂಟ್‌ ದೊರೆಯಲಿದೆ.

ಓಲಾ ಕಂಪನಿ ಕೇವಲ S1 ಪ್ರೊ, S1 ಏರ್ ಮತ್ತು S1 X+ (3kWh) ಮಾದರಿಗಳ ಬೆಲೆಗಳನ್ನು ಕಡಿಮೆ ಮಾಡಿದೆ. ಕಳೆದ ಡಿಸೆಂಬರ್‌ನಲ್ಲಿ Ola S1 ಹ್ಯಾಸ್‌ ಖರೀದಿ ಮೇಲೆ 20,000 ರೂಪಾಯಿ ರಿಯಾಯಿತಿ  ನೀಡಲಾಗಿತ್ತು. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುವವರಿಗೆ ಫೆಬ್ರವರಿ ತಿಂಗಳು ಸಕಾಲ.

S1 ಪ್ರೊ ಹಿಂದಿನ ಬೆಲೆ – 1,47,499 ರೂ.

ನವೀಕರಿಸಿದ ಬೆಲೆ – 1,29,999 ರೂ.

S1 ಏರ್‌ನ ಹಿಂದಿನ ಬೆಲೆ – 1,19,999 ರೂ.

ನವೀಕರಿಸಿದ ಬೆಲೆ – 1,04,999 ರೂ.

S1 X+ನ ಹಿಂದಿನ ಬೆಲೆ 1,09,999 ರೂ.

ನವೀಕರಿಸಿದ ಬೆಲೆ – 84,999 ರೂ.

ಈ ತಿಂಗಳ ಆರಂಭದಲ್ಲಿ ಓಲಾ ತನ್ನ ಸಂಪೂರ್ಣ ಉತ್ಪನ್ನ ಶ್ರೇಣಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 8 ವರ್ಷಗಳ ಗ್ಯಾರಂಟಿಹೊಂದಿಗೆ 80,000 ಕಿಮೀ ಕ್ರಮಿಸಬಲ್ಲ ವಿಸ್ತೃತ ಬ್ಯಾಟರಿಯನ್ನು ನೀಡಿತ್ತು. ಇದಲ್ಲದೆ ಕಂಪನಿಯ ಸೇವಾ ಜಾಲವನ್ನು ಸುಮಾರು 50 ಪ್ರತಿಶತದಷ್ಟು ವಿಸ್ತರಿಸುವ ಯೋಜನೆಯೂ ಇದೆ. ಸದ್ಯ ಓಲಾ, ದೇಶದಲ್ಲಿ ಒಟ್ಟು 414 ಸೇವಾ ಕೇಂದ್ರಗಳನ್ನು ಹೊಂದಿದೆ. ಇದನ್ನು ಏಪ್ರಿಲ್ 2024 ರ ವೇಳೆಗೆ 600 ಸೇವಾ ಕೇಂದ್ರಗಳಾಗಿ ಪರಿವರ್ತಿಸಲಾಗುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read