ಸ್ವಂತ ಮನೆ ಕನಸು ಕಂಡವರಿಗೆ ಸಿಹಿ ಸುದ್ದಿ: ಸೈಟ್, ಫ್ಲ್ಯಾಟ್, ವಿಲ್ಲಾಗಳ ಆರಂಭಿಕ ಠೇವಣಿ ಶೇ. 50ರಷ್ಟು ಇಳಿಕೆ ಮಾಡಿದ ಬಿಡಿಎ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಿರ್ಮಿಸಿದ ವಿವಿಧ ಬಡಾವಣೆಗಳ ನಿವೇಶನಗಳು, ವಸತಿಗೃಹಗಳು, ವಿಲ್ಲಾಗಳ ಪ್ರಾರಂಭ ಠೇವಣಿ ಶುಲ್ಕವನ್ನು ಶೇಕಡ 50ರಷ್ಟು ಇಳಿಕೆ ಮಾಡಲಾಗಿದೆ.

ಈ ಹಿಂದೆ ಬಿಡಿಎನಲ್ಲಿ ಯಾವುದೇ ಫ್ಲ್ಯಾಟ್, ಸೈಟ್, ವಿಲ್ಲಾ ಖರೀದಿಸಲು ಪ್ರಾರಂಭಿಕ ಠೇವಣಿಯಾಗಿ ಆಸ್ತಿಯ ಒಟ್ಟಾರೆ ಮೌಲ್ಯದಲ್ಲಿ ಸಾಮಾನ್ಯ ವರ್ಗದವರಿಗೆ ಶೇಕಡ 25ರಷ್ಟು, ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇಕಡ 10ರಷ್ಟು ನಿಗದಿಪಡಿಸಲಾಗಿತ್ತು. ಈ ದರವನ್ನು ಅರ್ಧಕ್ಕೆ ಇಳಿಸಲಾಗಿದೆ.

ಈ ಮೊದಲು ಸಾಮಾನ್ಯ ವರ್ಗದವರಿಗೆ ಶೇಕಡ 12.50ರಷ್ಟು, ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇಕಡ 5ರಷ್ಟು ಶುಲ್ಕ ವಿಧಿಸಲಾಗುತ್ತಿತ್ತು. ಹೀಗಾಗಿ ಫ್ಲ್ಯಾಟ್, ಮನೆಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿತ್ತು. ಇದೇ ವರ್ಷ ಮೇ 1ರಿಂದ ಆರಂಭಿಕ ಮೊತ್ತ ಹೆಚ್ಚಿಸಲಾಗಿದ್ದು, ದರ ಹೆಚ್ಚಿದ ನಂತರ ಬೇಡಿಕೆ ಕುಗ್ಗಿತ್ತು. ಗ್ರಾಹಕರಿಂದ ಆಕ್ಷೇಪ ಕೂಡ ವ್ಯಕ್ತವಾಗಿತ್ತು. ಹೀಗಾಗಿ ಗ್ರಾಹಕರ ಒತ್ತಾಯದ ಮೇರೆಗೆ ಹಳೆಯ ದರವನ್ನೇ ಮುಂದುವರೆಸಲಾಗಿದೆ ಎಂದು ಹೇಳಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read