ಬೆಂಗಳೂರು: ರಾಜ್ಯದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಪರಿಷ್ಕೃತ ನಕ್ಷೆ ಪಡೆಯಲು ಸರ್ಕಾರ ಅಸ್ತು ಎಂದಿದೆ.
ನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪರವಾನಿಗೆ ನಿಯಮ ಉಲ್ಲಂಘನೆ ಮಾಡಿದ ಕಟ್ಟಡಗಳಿಗೆ ವಿನಾಯಿತಿ ನೀಡಿ ದಂಡ ಪಾವತಿಸಿ ಪರಿಷ್ಕೃತ ನಕ್ಷೆ ಪಡೆದುಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ. ಶೇಕಡ 15ರ ಮಿತಿಯೊಳಗೆ ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ಮಾತ್ರ ಅನ್ವಯವಾಗುವಂತೆ ಆದೇಶ ಮಾಡಲಾಗಿದೆ. ಸೆಟ್ ಬ್ಯಾಕ್, ಕಾರ್ ಪಾರ್ಕಿಂಗ್ ಉಲ್ಲಂಘನೆ ಮಾಡಿದವರಿಗೆ ಅವಕಾಶ ನೀಡಲಾಗಿದೆ. ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ದಂಡ ನಿಗದಿ ಮಾಡಲಾಗಿದೆ,
ಶೇಕಡ 15ರ ಮಿತಿಯೊಳಗೆ ನಿಯಮ ಉಲ್ಲಂಘನೆ ಮಾಡಿದ ಕಟ್ಟಡಗಳಿಗೆ ಆದೇಶ ಅನ್ವಯವಾಗಲಿದೆ. ಸೆಟ್ ಬ್ಯಾಕ್, ಕಾರ್ ಪಾರ್ಕಿಂಗ್ ಉಲ್ಲಂಘನೆ ಮಾಡಿದವರಿಗೆ ದಂಡ ಪಾವತಿಗೆ ಅವಕಾಶ ನೀಡಲಾಗಿದೆ. ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ ಪಾರ್ಕಿಂಗ್ ಉಲ್ಲಂಘನೆಗೆ 5000 ರೂ. ದಂಡ ವಿಧಿಸಲಾಗುವುದು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕಾ ಕಟ್ಟಡಕ್ಕೆ ಪ್ರತಿ ಚ.ಮೀಗೆ 1,000 ರೂ. ದಂಡ, ವಾಣಿಜ್ಯ ಕಟ್ಟಡಕ್ಕೆ ಪ್ರತಿ ಚ.ಮೀಗೆ 1,500 ರೂ. ದಂಡ ನಿಗದಿ ಮಾಡಲಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕಾ ಕಟ್ಟಡಕ್ಕೆ ಪ್ರತಿ ಚ.ಮೀಗೆ 1,200 ರೂ. ದಂಡ, ವಾಣಿಜ್ಯ ಕಟ್ಟಡಕ್ಕೆ ಪ್ರತಿ ಚ.ಮೀಗೆ 1,800 ರೂ. ದಂಡ ನಿಗದಿಪಡಿಸಲಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕಾ ಕಟ್ಟಡಕ್ಕೆ ಪ್ರತಿ ಚ.ಮೀಗೆ 1,500 ರೂ. ದಂಡ, ವಾಣಿಜ್ಯ ಕಟ್ಟಡಕ್ಕೆ ಪ್ರತಿ ಚ.ಮೀಗೆ 2,250 ರೂ. ದಂಡ ನಿಗದಿ ಮಾಡಲಾಗಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಸತಿ, ಕೈಗಾರಿಕಾ ಕಟ್ಟಡಕ್ಕೆ ಪ್ರತಿ ಚ.ಮೀಗೆ 2,000 ರೂ. ದಂಡ, ವಾಣಿಜ್ಯ ಕಟ್ಟಡಕ್ಕೆ ಪ್ರತಿ ಚ.ಮೀ.ಗೆ 3,000 ರೂ. ದಂಡ ನಿಗದಿ ಮಾಡಲಾಗಿದೆ.

 
			 
		 
		 
		 
		 Loading ...
 Loading ... 
		 
		 
		