ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಸಿಹಿ ಸುದ್ದಿ ಇಲ್ಲಿದೆ. ಹಬ್ಬದ ಹಿನ್ನೆಲೆ ಅ.17ರಿಂದ 20ರವರೆಗೆ KSRTC ವತಿಯಿಂದ 2,500 ಹೆಚ್ಚುವರಿ ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕೆಎಸ್ಆರ್ಟಿಸಿ ಸಾಮಾನ್ಯ ಸಾರಿಗೆ, ಐರಾವತ, ಸ್ಲೀಪರ್ ಕೋಚ್ ಸೇರಿ ಎಲ್ಲಾ ಐಷಾರಾಮಿ ಬಸ್ಗಳ ಸೇವೆ ಲಭ್ಯವಿರುತ್ತವೆ.
ಬೆಂಗಳೂರಿನ ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್, ಪೀಣ್ಯಾ ಬಸ್ ನಿಲ್ದಾಣದಿಂದ ಬಸ್ಗಳು ಈ ನಾಲ್ಕು ದಿನ ಬೆಂಗಳೂರಿನಿಂದ ರಾಜ್ಯದ ನಾನಾಕಡೆಗಳಿಗೆ ಬಸ್ ವ್ಯವಸ್ಥೆ ಇರಲಿದೆ.
ಅ.22 ಹಾಗೂ 26ರಂದು ಬೆಂಗಳೂರಿಗೆ ವಾಪಸ್ ಬರುವ ಪ್ರಯಾಣಿಕರಿಗೂ ಈ ಸೇವೆ ಇರಲಿದೆ. ರಾಜ್ಯ ಹಾಗೂ ಅಂತರಾಜ್ಯದಿಂದಲೂ ಕೆಎಸ್ಆರ್ಟಿಸಿ ಬಸ್ಗಳು ಲಭ್ಯವಿರಲಿದೆ.
ಮೆಜೆಸ್ಟಿಕ್ ನಿಂದ ಧರ್ಮಸ್ಥಳ, ಶೃಂಗೇರಿ, ಹೊರನಾಡು, ಮಂಗಳೂರು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಗೋಕರ್ಣ, ಕಾರವಾರ ಭಾಗ. ಉತ್ತರ ಕರ್ನಾಟಕದ ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ವಿಜಯಪುರ, ಯಾದಗಿರಿ ಸೇರಿ ಇತರೆಡೆ ಬಸ್ ವ್ಯವಸ್ಥೆ ಇರಲಿದೆ. ತಿರುಪತಿ, ವಿಜಯವಾಡ, ಹೈದರಾಬಾದ್ ಕಡೆಗೂ ಹೆಚ್ಚುವರಿ ಬಸ್ಗಳು ಸಂಚರಿಸಲಿವೆ.
ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು ಭಾಗದ ಎಲ್ಲಾ ಕಡೆ ಬಸ್ಗಳ ಕಾರ್ಯಾಚರಿಸಲಿದೆ. ಮಂಡ್ಯ, ರಾಮನಗರ, ಕುಶಾಲನಗರ, ಚಾಮರಾಜನಗರ, ಕೊಡಗು, ವಿರಾಜಪೇಟೆ, ಪಿರಿಯಾಪಟ್ಟಣಕ್ಕೆ ಬಸ್ಗಳು ಲಭ್ಯ ವ್ಯವಸ್ಥೆ ಇರಲಿದೆ.
ಶಾಂತಿನಗರ ಬಸ್ ನಿಲ್ದಾಣದಿಂದ ತಮಿಳುನಾಡು ಮತ್ತು ಕೇರಳ ಭಾಗಗಳಾದ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕೋಯಿಕೋಡ್, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಬಸ್ ಸಂಚರಿಸಲಿವೆ. ಮುಂಗಡ ಟಿಕೆಟ್ ಬುಕಿಂಗ್ ಗೆ ಶೇಕಡ 5ರಷ್ಟು ರಿಯಾಯಿತಿ ಇದ್ದು, ಎರಡೂ ಬದಿಯ ಮುಂಗಡ ಟಿಕೆಟ್ ಬುಕಿಂಗ್ ಗೆ ಶೇ. 10ರಷ್ಟು ರಿಯಾಯಿತಿ ನೀಡಲಾಗುವುದು.