ಬೆಂಗಳೂರು ಟ್ರಾಫಿಕ್ ನಿಂದ ರೋಸಿ ಹೋದವರಿಗೆ ಗುಡ್ ನ್ಯೂಸ್: ಬಿಎಂಟಿಸಿಯಿಂದ ಸೀಮಿತ ನಿಲುಗಡೆಯ ಎಕ್ಸ್ಪ್ರೆಸ್ ಸಾರಿಗೆ ಸೇವೆ ಆರಂಭ

ಬೆಂಗಳೂರು: ಬಿಎಂಟಿಸಿ ಬಸ್‌ಗಳು ಇಲ್ಲಿಯವರೆಗೆ ಎಲ್ಲ ತಂಗುದಾಣಗಳಲ್ಲಿ ನಿಲುಗಡೆಗಳನ್ನು ಹೊಂದಿದ್ದವು. ದೂರ ಪ್ರಯಾಣದ ಬಸ್‌ಗಳು ಇನ್ನು ಮುಂದೆ ಸೀಮಿತ ನಿಲುಗಡೆ ವ್ಯವಸ್ಥೆಯಲ್ಲಿ ಸಂಚರಿಸಲಿವೆ.

ವೇಗದೂತ ಬಸ್‌ಗಳು ಸಂಚರಿಸುವ ಮಾರ್ಗಗಳಲ್ಲಿ ಎಲ್ಲ ಕಡೆ ನಿಲುಗಡೆ ಇರುವ ಸಾಮಾನ್ಯ ಬಸ್‌ಗಳು ಎಂದಿನಂತೆ ಇರಲಿವೆ. ಪ್ರಮುಖ ಕಾರಿಡಾರ್‌ಗಳಲ್ಲಿ ದೂರ ಪ್ರಯಾಣ ಮಾಡುವವರಿಗೆ ಸೀಮಿತ ನಿಲುಗಡೆಯ ವೇಗದೂತ ಬಸ್‌ಗಳು ಅನುಕೂಲವಾಗಲಿವೆ.

ಆರಂಭದಿಂದ ಕೊನೇ ತುದಿಯವರೆಗೆ ಸಂಚರಿಸುವ ಈ ಬಸ್‌ಗಳು ಬೆರಳೆಣಿಕೆಯ ನಿಲುಗಡೆಗಳನ್ನಷ್ಟೇ ಹೊಂದಿರುತ್ತವೆ. ಪ್ರಯಾಣದ ಸಮಯ ಕಡಿಮೆಯಾಗುವುದರಿಂದ ಉದ್ಯೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read