GOOD NEWS : ರಾಜ್ಯದ 70 ವರ್ಷ ಮೇಲ್ಪಟ್ಟ ‘ಹಿರಿಯ ನಾಗರಿಕ’ರಿಗೆ ಗುಡ್ ನ್ಯೂಸ್ : ‘ಆರೋಗ್ಯ ಸೇವೆ’ ವಿಸ್ತರಿಸಿ ಸರ್ಕಾರ ಆದೇಶ

ಬೆಂಗಳೂರು : ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಆರೋಗ್ಯ ಸೇವೆಗಳನ್ನು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ (ESIS ಫಲಾನುಭವಿಗಳು ಸೇರಿದಂತೆ) ವಯ ವಂದನ ಯೋಜನೆಯಡಿಯಲ್ಲಿ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಲಾಗಿರುವ ಅಂಶಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ವಯೋ ವಂದನಾ ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಹಾಗೂ ಭಾರತ ಸರ್ಕಾರದ ಅನುಮೋದನೆಯ ಷರತ್ತಿಗೊಳಪಟ್ಟು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ (ESIS ಫಲಾನುಭವಿಗಳನ್ನು ಒಳಗೊಂಡಂತೆ) ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಪ್ರಯೋಜನಗಳನ್ನು ವಿಸ್ತರಿಸಲು ಸರ್ಕಾರವು ಅನುಮೋದಿಸಿದೆ.ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ: ಆಇ 59 ವೆಚ್ಚ-5/2025 ದಿನಾಂಕ: 09.09.2025 ರಲ್ಲಿ ನೀಡಿರುವ ಸಹಮತಿ ಮತ್ತು ಸಚಿವ ಸಂಪುಟ ನಿರ್ಣಯ ಸಂಖ್ಯೆ: 11-9-2025 ರಲ್ಲಿನ ಅನುಮೋದನೆ ಮೇರೆಗೆಹೊರಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read