ಬೆಂಗಳೂರು: ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳಿಗೆ ವೈದ್ಯಕೀಯ ತಪಾಸಣೆ ಭತ್ಯೆ ಹೆಚ್ಚಳ ಮಾಡಿದ ಬಳಿಕ ಕನ್ನಡಕ ಖರೀದಿಗೆ 3000 ರೂ. ಧನ ಸಹಾಯ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಸೇವಾವಧಿಯಲ್ಲಿ ಮೂರು ಬಾರಿ ಕನ್ನಡಕ ಖರೀದಿಸಲು ನೆರವು ನೀಡಲಾಗುವುದು. ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು, ಲಿಪಿಕ ಅಧಿಕಾರಿಗಳು, ಠಾಣೆಯಲ್ಲಿರುವ ಸಿಬ್ಬಂದಿ ಸೇವಾ ಅವಧಿಯಲ್ಲಿ ಮೂರು ಬಾರಿ ಕನ್ನಡಕ ಖರೀದಿಸಲು ಒಂದು ಬಾರಿಗೆ 3,000 ರೂ.ನಂತೆ ಸೇವಾ ಅವಧಿಯಲ್ಲಿ 9 ಸಾವಿರ ರೂಪಾಯಿ ನೀಡಲಾಗುವುದು.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮಕ್ಕಳಿಗೆ ಪೊಲೀಸ್ ಕಲ್ಯಾಣ ನಿಧಿಯಿಂದ ಮಂಜೂರಾಗುತ್ತಿರುವ ಸಹಾಯಧನ ಪರಿಷ್ಕರಿಸಲಾಗಿದೆ.
ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ 10 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಎಲ್ಲಾ ಪದವಿ ಕೋರ್ಸುಗಳಿಗೆ 20,000 ರೂ., ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ 30,000 ರೂ. ಇಂಜಿನಿಯರಿಂಗ್ ಕೋರ್ಸ್ ಗಳಿಗೆ 40 ಸಾವಿರ ರೂ., ಇಂಜಿನಿಯರಿಂಗ್ ಸ್ನಾತಕೋತ್ತರ ಕೋರ್ಸ್ ಗಳಿಗೆ 50,000 ರೂ., ವೈದ್ಯಕೀಯ ವ್ಯಾಸಂಗಕ್ಕೆ 60,000 ರೂ. ನೀಡಲಾಗುವುದು ಎನ್ನಲಾಗಿದೆ.