ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಶೀಘ್ರವೇ 5250 ಹೊಸ ಎಲೆಕ್ಟ್ರಿಕ್ ಬಸ್ ಗಳು ಸೇರ್ಪಡೆಯಾಗಲಿವೆ. ಪಿಎಂ ಇ-ಡ್ರೈವ್, ಇ- ಬಸ್ ಯೋಜನೆಯಡಿ ಕೇಂದ್ರದ ಸಬ್ಸಿಡಿ ಮೂಲಕ 5250 ಎಲೆಕ್ಟ್ರಿಕ್ ಬಸ್ ಗಳುಳ ಸೇರ್ಪಡೆಯಾಗಲಿದೆ.
ಬಿಎಂಟಿಸಿಗೆ 4500 ಎಲೆಕ್ಟ್ರಿಕ್ ಬಸ್ ಗಳನ್ನು ನೀಡಲಾಗುವುದು. ಉಳಿದಂತೆ ಪಿಎಂ ಇ- ಬಸ್ ಸೇವಾ ಅಡಿ ಕೆಎಸ್ಆರ್ಟಿಸಿಗೆ 350, ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ.ಗೆ 200 ಬಸ್ ಗಳು, ಕೆಕೆಆರ್ಟಿಸಿಗೆ 200 ಬಸ್ ಸೇರಿ ಒಟ್ಟು 750 ಎಲೆಕ್ಟ್ರಿಕ್ ಬಸ್ ಗಳನ್ನು ನೀಡಲು ಅನುಮೋದನೆ ನೀಡಲಾಗಿದೆ.
ಈ ಎಲ್ಲಾ ಎಲೆಕ್ಟ್ರಿಕ್ ಬಸ್ ಗಳನ್ನು ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ ಅಡಿಯಲ್ಲಿ ಪಡೆಯಲಾಗುವುದು. ಎಲ್ಲಾ ಎಲೆಕ್ಟ್ರಿಕ್ ಬಸ್ ಗಳನ್ನು ಗುತ್ತಿಗೆ ಆಧಾರದಲ್ಲಿ ಖಾಸಗಿ ಸಂಸ್ಥೆ ಪೂರೈಸಲಿದ್ದು, ನಿರ್ವಹಣೆ ಮಾಡಲಿದೆ.