ರಾಜ್ಯದ ಜನತೆಗೆ ಗುಡ್ ನ್ಯೂಸ್ : 10 ನಿಮಿಷದಲ್ಲಿ 50 ಪರೀಕ್ಷೆ ನಡೆಸುವ ` ಹೆಲ್ತ್ ಎಟಿಎಂ’ ಯೋಜನೆಗೆ ಸಿಎಂ ಚಾಲನೆ

ಕಲಬುರಗಿ : ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, 10 ನಿಮಿಷದಲ್ಲಿ 50 ಪರೀಕ್ಷೆಗಳನ್ನು ನಡೆಸುವ ಹೆಲ್ತ್ ಎಟಿಎಂಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.

ಹೃದ್ರೋಗ, ಎಚ್.ಐ.ವಿ., ಸ್ಯಾತುರೇಚನ್, ಇ.ಸಿ.ಜಿ, ಡೆಂಗ್ಯೂ, ಮಲೇರಿಯಾ ಹೀಗೆ 50ಕ್ಕೂ ಹೆಚ್ಚು ರಕ್ತ ತಪಾಸಣೆಗಳ ವರದಿಯನ್ನು 10 ನಿಮಿಷದಲ್ಲಿಯೇ ಒದಗಿಸುವ “ಹೆಲ್ತ್ ಎ.ಟಿ.ಎಂ.” ಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರ ದೂರದೃಷ್ಠಿ ಯೋಜನೆಯ ಫಲವಾಗಿ 5 ಕೋಟಿ ರೂ. ಸಿ.ಎಸ್.ಆರ್ ನಿಧಿಯಡಿ ಕಲಬುರಗಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಹೆಚ್ಚಿನ ಆರೋಗ್ಯ ಸೌಕರ್ಯ ಇಲ್ಲದ 10 ಪ್ರಾಥಮಿಕ ಅರೋಗ್ಯ ಕೇಂದ್ರ, 8 ವೆಲ್‍ನೆಸ್ ಸೆಂಟರ್, ಹೆಚ್ಚಿನ ಜನಬಿಡಿತ ಪ್ರದೇಶಗಳಾದ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಪಾಲಿಕೆ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ನಮ್ಮ ಕ್ಲೀನಿಕ್ ಹಾಗೂ ಇನ್ನಿತರ ಸ್ಥಳದಲ್ಲಿ ಒಟ್ಟಾರೆ 25 ಕಡೆ ಈ “ಹೆಲ್ತ್ ಎ.ಟಿ.ಎಂ” ಸ್ಥಾಪಿಸಲಾಗುತ್ತಿದೆ. ಸ್ಥಳದಲ್ಲಿ ಲ್ಯಾಬ್ ಟೆಕ್ನಿಷಿಯನ್ ಇರಲಿದ್ದಾರೆ. ಇಲ್ಲಿ ಸಾರ್ವಜನಿಕರು ಟೆಲಿ ಮೆಡಿಸಿನ್ ಸೇವೆ ಪಡೆಯಲು ಸಹ ಅವಕಾಶ ಕಲ್ಪಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read