GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ :  ‘ಕೃಷಿ ಭಾಗ್ಯ’ ಯೋಜನೆಯಡಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಕೃಷಿ ಇಲಾಖೆ ವತಿಯಿಂದ 2025-26 ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಅರ್ಹ ರೈತರಿಂದ ಅರ್ಜಿ ಅಹ್ವಾನಿಸಲಾಗಿದೆ.

ರೈತರು ಕೃಷಿ ಭಾಗ್ಯಯೋಜನೆಯಡಿ ಆರು ಘಟಕಗಳಾದ ಕೃಷಿ ಹೊಂಡ, ತಂತಿಬೇಲಿ, ಟಾರ್ಪಲ್ ಹೊದಿಕೆ, ಕ್ಷೇತ್ರ ಬದು, ಡಿಸೇಲ್ ಇಂಜನ್ ಹಾಗೂ ತುಂತುರು ನೀರಾವರಿಗೆ ಪ್ಯಾಕೇಜ್ ಮಾದರಿಯಲ್ಲಿ ಸಹಾಯಧನ ಪಡೆಯಲು ಲಭ್ಯವಿದ್ದು, ಎಲ್ಲಾ ವರ್ಗದ ಅರ್ಹ ರೈತರು ಅರ್ಜಿ ಸಲ್ಲಿಸಬಹುದಾಗಿದೆ.

ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕಗಳಿಗೆ ಮತ್ತು ಹನಿ ನೀರಾವರಿ ಘಟಕಗಳಿಗೆ (ಕೃಷಿ ಬೆಳೆಗಳಿಗೆ ಮಾತ್ರ) ಎಲ್ಲಾ ವರ್ಗದ ರೈತರಿಗೆ ಶೇ.90 ರಷ್ಟು ಸಹಾಯಧನ ನೀಡಲಾಗುತ್ತದೆ. ಕೊಳವೆ ಬಾವಿ ಅಥವಾ ನೀರಾವರಿ ಮೂಲ ಹೊಂದಿರುವ ಮತ್ತು ಕನಿಷ್ಠ 1 ಎಕರೆ ಜಮೀನು ಹೊಂದಿರುವ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರೀಕರಣ ಯೋಜನೆಯಡಿ ಆಹಾರ ಸಂಸ್ಕರಣಾ ಘಟಕಗಳನ್ನು ಹೊಸದಾಗಿ ಪ್ರಾರಂಭಿಸಲು ಮತ್ತು ಚಾಲ್ತಿಯಲ್ಲಿರುವ ಆಹಾರ ಸಂಸ್ಕರಣಾ ಘಟಕಗಳನ್ನು ಉನ್ನತೀಕರಿಸಲು ಮತ್ತು ವಿಸ್ತರಿಸಲು ಅವಕಾಶ ನೀಡಲಾಗಿದೆ. ಈ ಯೋಜನೆಯಡಿ ಕೈಗೊಳ್ಳಲಾಗಿರುವ ಘಟಕಗಳಿಗೆ ಕೇಂದ್ರ ಸರ್ಕಾರದ ವತಿಯಿಂದ ಶೇ.35 ಮತ್ತು ರಾಜ್ಯ ಸರ್ಕಾರದ ವತಿಯಿಂದ ಶೇ.15 ರಂತೆ ಒಟ್ಟಾರೆ ಶೇ.50 ರಷ್ಟು ಸಹಾಯಧನ ಫಲಾನುಭವಿಗಳಿಗೆ ನೀಡಲಾಗುವುದು. ಪ್ರಸ್ತಾವನೆಯ ಒಟ್ಟು ಮೊತ್ತದಲ್ಲಿ ಕೇವಲ ಶೇ.10 ರಷ್ಟನ್ನು ಫಲಾನುಭವಿಗಳು ಭರಿಸಬೇಕಾಗಿದ್ದು ಉಳಿದ ಶೇ.90 ಬ್ಯಾಂಕಿನಿAದ ಸಾಲ ನೀಡಲಾಗುವುದು. ಸದರಿ ಯೋಜನೆಯಡಿ ಬೆಳೆಯ ಸಂಸ್ಕರಣೆ, ಮೌಲ್ಯವರ್ಧನೆ, ಪ್ಯಾಕಿಂಗ್, ಬ್ರ್ಯಾಂಡಿಂಗ್ , ಲೇಬಲಿಂಗ್ ಹಾಗೂ ಮಾರುಕಟ್ಟೆ ಬೆಂಬಲ ಘಟಕಗಳಿಗೆ ಮತ್ತು ಈಗಾಗಲೇ ಚಾಲ್ತಿಯಲ್ಲಿರುವ ಸಂಸ್ಕರಣೆ ಘಟಕಗಳ ಉನ್ನತೀಕರಣಕ್ಕೆ ಸಹಾಯಧನ ನೀಡಲಾಗುವುದು.

ಜಿಲ್ಲೆಯಲ್ಲಿ ಎಲ್ಲಾ ಬೆಳಗಳ ದೇಸಿ ತಳಿಗಳನ್ನು ಸಂರಕ್ಷಿಸಲು ಕ್ರಮವಹಿಸಿದ್ದು, ರೈತರಲ್ಲಿ ಲಭ್ಯವಿರುವ ದೇಸಿ ತಳಿಗಳನ್ನು ರೈತರ ಹೆಸರಿನಲ್ಲಿಯೇ ಸಂರಕ್ಷಿಸಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 12 ತಳಿಗಳನ್ನು ಸಂಗ್ರಹಿಸಲಾಗಿದ್ದು, ರೈತರು ತಮ್ಮಲ್ಲಿ ದೇಸಿ ತಳಿಗಳು ಲಭ್ಯ ಇದ್ದಲ್ಲಿ ಕೂಡಲೇ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬೇಕು.
ಆಸಕ್ತ ರೈತರು ಅರ್ಜಿಗಳನ್ನು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಸಲ್ಲಿಸಿ ಯೋಜನೆಗಳಡಿ ನೋಂದಾಯಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಕರೆ ಕೇಂದ್ರದ ಸಂಖ್ಯೆ 1800-425-3553 ಗೆ ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read