ಬೆಂಗಳೂರು : ಬಿಗ್ ಬಾಸ್-10 ರಲ್ಲಿ ನಟ ಕಾರ್ತಿಕ್ ಬಿಗ್ ಬಾಸ್ ಟ್ರೋಫಿ ಮುಡಿಗೇರಿಸಿಕೊಂಡಿದ್ದು, ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದರು. ಇದೀಗ ಕಿರುತೆರೆ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಏನಪ್ಪ ಅಂದರೆ ಬಿಗ್ ಬಾಸ್-11 ಶುರುವಾಗುತ್ತಿದೆ.
ಹೌದು, ಈ ಬಾರಿ ಅಕ್ಟೋಬರ್ ತಿಂಗಳಿನಿಂದ ಬಿಗ್ ಬಾಸ್ ಶೋ ಆರಂಭವಾಗಲಿದ್ದು, ಈಗಾಗಲೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ. ಸಿನಿಮಾ ಹಾಗೂ ಕಿರುತೆರೆ ನಟ-ನಟಿಯರು ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ.
ಕಳೆದ ಬಿಗ್ ಬಾಸ್-10 ಕೆಲವು ವಿವಾದಗಳಿಂದ ಭಾರಿ ಸುದ್ದಿಯಾಗಿತ್ತು. ಹುಲಿ ಉಗುರು ಪ್ರಕರಣದಲ್ಲಿ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಿಂದಲೇ ಅರೆಸ್ಟ್ ಆಗಿ ನಂತರ ಬಿಡುಗಡೆ ಆಗಿದ್ದರು. ಅಲ್ಲದೇ ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ಡ್ರೋನ್ ಪ್ರತಾಪ್ ಕೆಲವು ವಿವಾದಗಳಿಂದಲೇ ಸುದ್ದಿ ಆಗಿದ್ದರು. ಈ ಬಾರಿ , ‘ಮಜಾಭಾರತ’ ಖ್ಯಾತಿಯ ರಾಘವೇಂದ್ರ , ತುಕಾಲಿ ಸ್ಟಾರ್’ ಸಂತು ಪತ್ನಿ ಮಾನಸಾ, ಸುನೀಲ್ ರಾವ್, ಭವ್ಯಾ ಗೌಡ, ಮೋಕ್ಷಿತಾ ಪೈ, ರೀಲ್ಸ್ ರೇಷ್ಮಾ ಹೀಗೆ ಹಲವು ಸ್ಪರ್ಧಿಗಳ ಹೆಸರು ಕೇಳಿ ಬರುತ್ತಿದೆ. ‘ ಬಿಗ್ ಬಾಸ್ ಮನೆ ಪ್ರವೇಶಿಸುವವರು ಯಾರು..? ಎಂಬುದಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ.
https://twitter.com/Riskyprince17/status/1813805677086949777?ref_src=twsrc%5Etfw%7Ctwcamp%5Etweetembed%7Ctwterm%5E1813805677086949777%7Ctwgr%5E77ebf9a7bf2e4ea7405131f9c471854374e268ba%7Ctwcon%5Es1_&ref_url=https%3A%2F%2Fvistaranews.com%2Fbigg-boss-kannada%2Fbigg-boss-kannada-11-starting-date-and-contestants-list%2F696964.html