ವರ್ಗಾವಣೆ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಕೊನೆಗೂ ಗುಡ್ ನ್ಯೂಸ್: ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಬೆಂಗಳೂರು: ತಾಂತ್ರಿಕ ಕಾರಣಗಳಿಂದ ತಡೆ ನೀಡಲಾಗಿದ್ದ ಸರ್ಕಾರಿ ಶಾಲೆ ಶಿಕ್ಷಕರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ-2 ಅನ್ನು ಶಾಲಾ ಶಿಕ್ಷಣ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ.

ಶುಕ್ರವಾರದಿಂದಲೇ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆಗಸ್ಟ್ 12 ರಂದು ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆ ಪರಿಷ್ಕೃತ ಕರಡುಪಟ್ಟಿ ಪ್ರಕಟಿಸಲಾಗುವುದು. ಶಿಕ್ಷಕರ ಸಮರ್ಪಕ ಮರು ಹಂಚಿಕೆ, ಕೌನ್ಸೆಲಿಂಗ್, ಕೋರಿಕೆ ಮತ್ತು ಪರಸ್ಪರ ವರ್ಗಾವಣೆ, ನಿರ್ದಿಷ್ಟಪಡಿಸಿದ ತಾಂತ್ರಿಕ ಸಹಾಯಕರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವರ್ಗಾವಣೆ ಕ್ರಮಗಳು, ಸಾಮಾನ್ಯ ಕೋರಿಕೆ, ಪರಸ್ಪರ ವರ್ಗಾವಣೆ, ಜಿಲ್ಲಾ ಹಂತದ ವರ್ಗಾವಣೆ, ಕೌನ್ಸೆಲಿಂಗ್ ಮೂಲಕ ವಿಭಾಗೀಯ ಹಂತದ ವರ್ಗಾವಣೆ ಕ್ರಮಗಳು, ಅಂತರ ವಿಭಾಗೀಯ ಹಂತದ ವರ್ಗಾವಣೆ ಕ್ರಮಗಳು ಈ ಎಲ್ಲಾ ವಿಭಾಗಗಳಿಗೂ ಪ್ರತ್ಯೇಕ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ಕ್ರಿಮಿನಲ್ ಮೊಕದ್ದಮೆ, ಇಲಾಖೆಯ ಶಿಸ್ತು ಕ್ರಮ ಎದುರಿಸುತ್ತಿರುವ ಶಿಕ್ಷಕರ ಅರ್ಜಿಗಳು ವರ್ಗಾವಣೆ ಕೌನ್ಸೆಲಿಂಗ್ ಗೆ ಅರ್ಹವಾಗಿರುವುದಿಲ್ಲ ಎಂದು ಹೇಳಲಾಗಿದೆ.

ಪ್ರಾಥಮಿಕ ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳನ್ನು ಲಿಖಿತ ಪರೀಕ್ಷೆ ನಡೆಸುವ ಮೂಲಕ ಇದರ ವೇಳಾಪಟ್ಟಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ ಆಗಸ್ಟ್ 13 ರಿಂದ ಸೆಪ್ಟಂಬರ್ 3ರವರೆಗೆ ಈ ಪ್ರಕ್ರಿಯೆ ನಡೆಯಲಿದೆ.

ರಾಜ್ಯ ಸರ್ಕಾರ ಕಾಲಕ್ಕೆ ನಿಗದಿಪಡಿಸಿದ ಅನುಪಾತ ಆಧಾರದ ಮೇಲೆ ಶಿಕ್ಷಕರನ್ನು ಮರು ಹಂಚಿಕೆ ಮಾಡಲಾಗುವುದು.

ಹೆಚ್ಚಿನ ವಿವರಗಳಿಗಾಗಿ https://schooleducation.karnataka.gov.in ವೆಬ್ ಸೈಟ್ ಗಮನಿಸಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read