ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಮೊಬೈಲ್ ಆ್ಯಪ್, ಚಾಟ್ ಬಾಟ್ ಸೇರಿ ಹಲವು ಸೇವೆ ಜಾರಿಗೆ ತಂದ ಕೆಇಎ

ಬೆಂಗಳೂರು: ವಿದ್ಯಾರ್ಥಿ ಸ್ನೇಹಿ ಕಾಲೇಜು ಪೋರ್ಟಲ್, ಮೊಬೈಲ್ ಆ್ಯಪ್ ಮತ್ತು ಚಾಟ್ ಬಾಟ್ ನಂತಹ ಹೊಸ ಸೇವೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಜಾರಿಗೆ ತಂದಿದೆ.

ಇದರಿಂದಾಗಿ ವಿದ್ಯಾರ್ಥಿಗಳು ಪ್ರವೇಶ ಬಯಸುವ ಕಾಲೇಜಿನ ಫೋಟೋ, ಲಭ್ಯವಿರುವ ಸೌಲಭ್ಯ, ಬೋಧಕರು, ಬೋಧಕೇತರ ಸಿಬ್ಬಂದಿ, ಮಾನ್ಯತೆ ಸೇರಿದಂತೆ ಎಲ್ಲಾ ಮಾಹಿತಿ ಕೆಇಎ ಪ್ರತ್ಯೇಕವಾಗಿ ಆರಂಭಿಸಿರುವ ಕಾಲೇಜು ಪೋರ್ಟಲ್ ನಲ್ಲಿ ಲಭ್ಯವಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಕಾಲೇಜಿನ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ. ಕೆಇಎ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ಮಾಹಿತಿ ಒಂದೇ ಕಡೆ ಲಭ್ಯವಾಗಲಿದೆ.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಸೋಮವಾರ ಉನ್ನತ ಶಿಕ್ಷಣ ಪರಿಷತ್ ನಲ್ಲಿ ಈ ಮೂರು ಹೊಸ ವಿದ್ಯಾರ್ಥಿ ಸ್ನೇಹಿ ಸೇವೆಗಳಿಗೆ ಚಾಲನೆ ನೀಡಿದ್ದಾರೆ.

ಅಭ್ಯರ್ಥಿಗಳು ಆಪ್ಷನ್ ದಾಖಲಿಸುವ ಮೊದಲು ಕಾಲೇಜು ಆಯ್ಕೆ ಪ್ರಕ್ರಿಯೆ ಪ್ರಮುಖ ಘಟ್ಟವಾಗಿದ್ದು, ಅಂತಹ ಸಂದರ್ಭದಲ್ಲಿ ಸಂಪೂರ್ಣ ಮಾಹಿತಿಯನ್ನು ಪೋರ್ಟಲ್ ನಲ್ಲಿ ಪಡೆಯಬಹುದು. ಕೆಇಎನಲ್ಲಿ ಕಾಲೇಜಿನ ಪೋರ್ಟಲ್ ಲಿಂಕ್ ಇರಲಿದೆ. ಕಾಲೇಜುಗಳ ಮೂಲ ಸೌಕರ್ಯ, ಶೈಕ್ಷಣಿಕ ವಾತಾವರಣ, ಗ್ರಂಥಾಲಯ, ಹಾಸ್ಟೆಲ್, ಪ್ರಯೋಗಾಲಯ, ಕೋರ್ಸ್, ಶುಲ್ಕ ವಿವರ, ಅತಿಥಿ ಉಪನ್ಯಾಸಕರು ಸೇರಿ ಸಿಬ್ಬಂದಿಯ ಪೂರ್ಣ ವಿವರಗಳು ಪೋರ್ಟಲ್ ನಲ್ಲಿ ಲಭ್ಯವಾಗಲಿವೆ.

ಅಲ್ಲದೇ, ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುವ ಸಂಸ್ಥೆಗಳ ವಿರುದ್ಧ ದೂರು ದಾಖಲಿಸಲು ಇದೇ ಪೋರ್ಟಲ್ ನಲ್ಲಿ ಲಿಂಕ್ ನೀಡಲಾಗುವುದು.

ಇನ್ನು ಕೆಇಎ ನಡೆಸುವ ಎಲ್ಲಾ ರೀತಿ ಪ್ರವೇಶ ಪರೀಕ್ಷೆಗಳ ಮಾಹಿತಿ ನೀಡಲು ಮೊಬೈಲ್ ಆ್ಯಪ್ ರೂಪಿಸಲಾಗಿದೆ. ಇದನ್ನು ಅಭ್ಯರ್ಥಿಗಳು ಕೆಇಎ ವೆಬ್ ಸೈಟ್ ಗೆ ಭೇಟಿ ನೀಡಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಸಿಇಟಿಯ ಕ್ಷಣ ಕ್ಷಣದ ಮಾಹಿತಿ ಇದರಲ್ಲಿ ಸಿಗಲಿದೆ. ಆಪ್ಷನ್ ದಾಖಲಿಸುವುದು, ಆಯ್ಕೆ, ಶುಲ್ಕ ಪಾವತಿ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಇದರ ಮೂಲಕವೇ ನಿರ್ವಹಿಸಬಹುದಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read