ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಿಶೇಷ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ಬೆಂಗಳೂರು : 2023-24ನೇ ಸಾಲಿನಲ್ಲಿ ಬಿ.ಇಡಿ ಹಾಗೂ ಡಿ.ಇಡಿ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಹಧನ ನೀಡಲು ಆನ್‍ಲೈನ್ ಸೇವಾಸಿಂಧು ತಂತ್ರಾಂಶದ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

2023ರ ಸೆಪ್ಟೆಂಬರ್ 21 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, https://sevasindhu.karnataka.gov.in ವೆಬ್‍ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು

 ನಿವಾಸಿ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಿಂದಿನ ವರ್ಷದ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಶುಲ್ಕ ರಸೀದಿ, ಆಧಾರ್ ಕಾರ್ಡ್, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ವ್ಯಾಸಂಗ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಬುಕ್ (ಆಧಾರ್ ಲಿಂಕ್ ಮಾಡಿಸಿರಬೇಕು)

ಷರತ್ತುಗಳು: ಅಭ್ಯರ್ಥಿಗಳು ಕರ್ನಾಟಕ ರಾಜ್ಯ ನಿವಾಸಿಯಾಗಿರಬೇಕು, ಕೋರ್ಸ್‍ಗಳ ಅವಧಿಗೆ ತಕ್ಕಂತೆ ಪ್ರತಿ ವರ್ಷ ರೂ.25000/- ದಂತೆ (ಗರಿಷ್ಟ 2ವರ್ಷ) ಅನುದಾನವನ್ನು ನೀಡಲಾಗುವುದು. ಅಲ್ಪ ಸಲ್ಪಸಂಖ್ಯಾತರ ಅಭ್ಯರ್ಥಿಗಳು ಪೋಷಕರ ವಾರ್ಷಿಕ ವರಮಾನ ಗರಿಷ್ಟ ರೂ 6ಲಕ್ಷಗಳ ಮಿತಿಯಲ್ಲಿರಬೇಕು. ಅಭ್ಯರ್ಥಿಗಳನ್ನು ಅರ್ಹತೆ ಪರೀಕ್ಷೆ ಅಥವಾ ಹಿಂದಿನ ಸಾಲಿನ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಪ್ರೋತ್ಸಾಹಧನ ಪಡೆಯುವ ವಿದ್ಯಾರ್ಥಿಗಳು ಭಾರತ ಸರ್ಕಾರ ಅಥವಾ ಇತರೆ ವಿದ್ಯಾರ್ಥಿವೇತನ ಶಿಷ್ಯವೇತನ ಪಡೆಯಲು ಅರ್ಹರಿರುತ್ತಾರೆ, ಈ ಸೌಲಭ್ಯ ಪಡೆಯುವ ವಿದ್ಯಾರ್ಥಿಗಳು ಸರ್ಕಾರಿ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ನಿಯಮಾನುಸಾರ ಪ್ರವೇಶ ಪಡೆಯಲು ಅರ್ಹರಿರುತ್ತಾರೆ.

ವಿದ್ಯಾರ್ಥಿಗಳು ಬಿಎಡ್ ಹಾಗೂ ಡಿಎಡ್ ಕೋರ್ಸುಗಳಲ್ಲಿ ದಾಖಲಾಗಿರುವ ಹಾಗೂ ಶುಲ್ಕವನ್ನು ಭರಿಸಿರುವ ಬಗ್ಗೆ ಎಲ್ಲಾ ಅಧಿಕೃತ ದಾಖಲೆಗಳನ್ನು ಸಲ್ಲಿಸಬೇಕು. ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ಸ್ ಎಜುಕೇಷನ್‍ನಿಂದ ಮಾನ್ಯತೆ ಪಡೆದಿರುವ ಬಿಎಡ್ ಹಾಗೂ ಡಿಪಾರ್ಟ್‍ಮೆಂಟ್ ಆಫ್ ಸ್ಟೇಟ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್‍ನಿಂದ ಮಾನ್ಯತೆ ಪಡೆದಿರುವ ಡಿಎಡ್ ಕೋರ್ಸುಗಳ ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಲ್ಲಿ ದಾಖಲಾತಿ ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಅರ್ಹರಿರುತ್ತಾರೆ. ಅರ್ಜಿಸಲ್ಲಿಸುವ ವಿದ್ಯಾರ್ಥಿಗಳು ಅರ್ಹತೆ ಪರೀಕ್ಷೆ ಹಿಂದಿನ ಸಾಲಿನ ಪರೀಕ್ಷೆಯಲ್ಲಿ ಕನಿಷ್ಠ 50ರಷ್ಟು ಅಂಕಗಳನ್ನು ಪಡೆದಿರಬೇಕು. ಉತ್ತೀರ್ಣರಾಗದ ಅಭ್ಯರ್ಥಿಗಳು ಪ್ರೋತ್ಸಾಧನ ಪಡೆಯಲು ಅರ್ಹರಾಗಿರುವುದಿಲ್ಲ, ಮೊದಲನೇ ವರ್ಷದಲ್ಲಿ ಪ್ರೋತ್ಸಾಧನ ಪಡೆದಿರುವ ಅಭ್ಯರ್ಥಿಗಳು 2ನೇ ವರ್ಷಕ್ಕೆ ಪ್ರೋತ್ಸಾಧನ ಪಡೆಯಲು ಪ್ರತ್ಯೇಕ ಅರ್ಜಿ ಸಲ್ಲಿಸಬೇಕು.

ಪ್ರತಿ ಜಿಲ್ಲೆಗೆ ಬಿಡುಗಡೆ ಮಾಡಿರುವ ಅನುದಾನದಲ್ಲಿ ಕನಿಷ್ಠ ಶೇ 50ರಷ್ಟು ಬಾಲಕಿಯರಿಗೆ ಮೀಸಲಿರಿಸತಕ್ಕದ್ದು ಹಾಗೂ ಡಿಎಡ್ ಕೋರ್ಸ್‍ಗೆ ಶೇ.25ರಷ್ಟು ಮತ್ತು ಬಿಎಡ್ ಕೋರ್ಸ್‍ನ ಅಭ್ಯರ್ಥಿಗಳಿಗೆ ಶೇ. 75ರಷ್ಟು ಅನುಪಾತದಲ್ಲಿ ಉಪಯೋಗಿಸುವುದು, ಸುಳ್ಳು ಮಾಹಿತಿ ದಾಖಲಾತಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಿ ಪ್ರೋತ್ಸಾಧನ ಪಡೆದಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ನೀಡಲಾದ ಪ್ರೋತ್ಸಾಧನ ಮೊತ್ತವನ್ನು ವಸೂಲಿ ಮಾಡಿ ಸರ್ಕಾರಕ್ಕೆ ಹಿಂದಿರುಗಿಸಲಾಗುವದು. ಈ ಯೋಜನೆಯಡಿ ಪ್ರೋತ್ಸಾಧನ ಪಡೆದ ವಿದ್ಯಾರ್ಥಿಗಳು ಡಿಎಡ್ ಮತ್ತು ಬಿಎಡ್ ಕೋರ್ಸ್ ಪೂರ್ಣಗೊಳಿಸದೆ ಮಧ್ಯದಲ್ಲಿ  ಬಿಟ್ಟು ಹೋದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ವಿಚಾರಣೆ ನಡೆಸಿ ಇಲಾಖೆಯ ಮುಖ್ಯಸ್ಥರಿಗೆ ವರದಿ ಸಲ್ಲಿಸಬೇಕು ಅಂತಹ ಪ್ರಕರಣಗಳಲ್ಲಿ ಪರಿಶೀಲಿಸಿ ಇಲಾಖಾ ಮುಖ್ಯಸ್ಥರು ಅಂತಿಮ ನಿರ್ಣಯ ತೆಗೆದುಕೊಳ್ಳತಕೊಳ್ಳುತ್ತಾರೆ, ಒಂದು ಪಕ್ಷ ಸಮಂಜಸವಾದ ಕಾರಣವಿಲ್ಲದಿದ್ದಲ್ಲಿ ಸಂಬಂಧಪಟ್ಟ ಅಭ್ಯರ್ಥಿಗಳಿಗೆ ನೀಡಲಾದ ಮೊತ್ತವನ್ನು ವಸೂಲಿ ಮಾಡಿ ಸರ್ಕಾರಕ್ಕೆ ಹಿಂದಿರುಗಿಸಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read