ಬೆಂಗಳೂರು : ಆಸ್ತಿ ಮಾಲೀಕರಿಗೆ ಜು.31 ರವರೆಗೆ ವಿಶೇಷ ಇ-ಖಾತಾ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಭಾಗಿಯಾಗಬಹುದಾಗಿದೆ.
2025ರ ಜುಲೈ 1 ರಿಂದ 31 ರವರೆಗೆ ಬೆಂಗಳೂರಿನಲ್ಲಿ ಇ-ಖಾತಾ ಅಭಿಯಾನ ನಡೆಯಲಿದೆ. ಸೇವೆ ಪಡೆಯಲು ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ (080-4920 3888) ಅಥವಾ https://janasevaka.karnataka.gov.in ವೆಬ್ ಸೈಟ್ ವೀಕ್ಷಿಸಬಹುದಾಗಿದೆ.
ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ಅಂತಿಮ ಇ-ಖಾತಾವನ್ನು https://bbmpeasthi.karnataka.gov.in ಮೂಲಕ ಪಡೆಯಬಹುದು. ಇ-ಖಾತಾ ಸಂಬಂಧಿತ ವೀಡಿಯೋವನ್ನು ಕೆಳಗಿನ ಲಿಂಕ್ ನಿಂದ ವೀಕ್ಷಿಸಬಹುದು. https://tinyurl.com/36suwvn2 ನೋಡಬಹುದಾಗಿದೆ.
ಈ ದಾಖಲೆಗಳು ಕಡ್ಡಾಯ
1) ಮಾಲೀಕರ ಆಧಾರ
2) ಆಸ್ತಿ ತೆರಿಗೆ ಎಸ್ ಎ ಎಸ್ ಅರ್ಜಿ ಸಂಖ್ಯೆ
3) ಸ್ವತ್ತಿನ ಕ್ರಯ/ನೋಂದಾಯಿತ ಪತ್ರ ಸಂಖ್ಯೆ
4) ಬೆಸ್ಕಾಂ ಖಾತೆ ಸಂಖ್ಯೆ (ಖಾಲಿ ನಿವೇಶನಗಳಿಗೆ ಅಗತ್ಯವಿಲ್ಲ)
5) ಸ್ವತ್ತಿನ ಛಾಯಾಚಿತ್ರ
ಜನಸೇವಕನಿಗೆ ಪಾವತಿಸಬೇಕಾದ ಮೊತ್ತ
1) ಇಖಾತಾ ಅರ್ಜಿಗೆ . 45/-
2) ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಲು (ಪ್ರತಿ ಪುಟಕ್ಕೆ) : ರೂ. 5/-
3) ನಿಮ್ಮ ಮನೆ ಬಾಗಿಲಿಗೆ ಜನಸೇವಕನ ಸೇವಾ ಶುಲ್ಕ: ರೂ. 115/-
ಯಾವುದೇ ಬಿಬಿಎಂಪಿ ಕಚೇರಿಗೆ ಭೇಟಿ ನೀಡಬೇಡಿ ಅಥವಾ ಕರೆ ಮಾಡಬೇಡಿ.ಇ-ಖಾತಾ ಸಹಾಯವಾಣಿ ಸಂಖ್ಯೆ: 9480683695 ಕರೆ ಮಾಡಿ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
