ರಾಜ್ಯ ಸರ್ಕಾರದಿಂದ ಅರ್ಚಕರು, ನೌಕರರಿಗೆ ಗುಡ್ ನ್ಯೂಸ್ : ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ, ಉಚಿತ ಕಾಶಿಯಾತ್ರೆ

ಬೆಂಗಳೂರು : ರಾಜ್ಯ ಸರ್ಕಾರವು ದೇವಸ್ಥಾನಗಳ ಅರ್ಚಕರು ಹಾಗೂ ಸಿಬ್ಬಂದಿಗಳ ಮಕ್ಕಳಿಗೆ ಸಿಹಿಸುದ್ದಿ ನೀಡಿದ್ದು,  ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ.

ಈ ಕುರಿತು ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದು, ಬಿ ಮತ್ತು ಸಿ ವರ್ಗದ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರ ಅರ್ಚಕರು ಮತ್ತು ಸಿಬ್ಬಂದಿಯ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸರ್ಕಾರವು ಪಿಯುಸಿ ವಿದ್ಯಾರ್ಥಿಗಳಿಗೆ 5,000 ರೂ., ಐಟಿಐ/ ಜೆಒಸಿ/ ಡಿಪ್ಲೊಮಾ ವಿದ್ಯಾರ್ಥಿಗಳಿಗೆ 5,000 ರೂ., ಪದವಿಗೆ 7,000 ರೂ., ಸ್ನಾತಕೋತ್ತರರಿಗೆ 15,000 ರೂ., ಆಯುರ್ವೇದ 25,000 ರೂ. ವಾರ್ಷಿಕ ಆರ್ಥಿಕ ನೆರವು ನೀಡಲಿದೆ. ಹೋಮಿಯೋಪತಿ ಕೋರ್ಸ್‌ಗಳು, ತಾಂತ್ರಿಕ ಶಿಕ್ಷಣಕ್ಕೆ (ಎಂಜಿನಿಯರಿಂಗ್) 25,000 ರೂ., ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳಿಗೆ 50,000 ರೂ. ಮತ್ತು ವಿದೇಶದಲ್ಲಿ ಅಧ್ಯಯನಕ್ಕೆ 1 ಲಕ್ಷ ರೂ. ನೆರವು ಸಿಗಲಿದೆ ಎಂದು ಹೇಳಿದ್ದಾರೆ.

ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಅರ್ಚಕರು, ನೌಕರರ ಪೈಕಿ ವರ್ಷಕ್ಕೆ 1,200 ಮಂದಿಯನ್ನು ಕಾಶಿ, ಗಯಾ ಯಾತ್ರೆಗೆ ಉಚಿತವಾಗಿ ಕಳುಹಿಸಲಾಗುವುದು. ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಅರ್ಚಕರು, ನೌಕರರು ಮೃತರಾದರೆ ಅವರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read