ಸಾಕುಪ್ರಾಣಿಗಳ ಪೋಷಕರಿಗೆ ಗುಡ್ ನ್ಯೂಸ್: ನಾಯಿ, ಬೆಕ್ಕಿನೊಂದಿಗೆ ರೈಲಿನಲ್ಲಿ ಪ್ರಯಾಣಿಸಲು ಆನ್ ಲೈನ್ ಬುಕಿಂಗ್ ಸೌಲಭ್ಯ

ಸಾಕುಪ್ರಾಣಿಗಳ ಪೋಷಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ರೈಲ್ವೇ ಸಚಿವಾಲಯವು AC-1 ವರ್ಗದ ರೈಲುಗಳಲ್ಲಿ ನಾಯಿ ಮತ್ತು ಬೆಕ್ಕಿನ ಪ್ರಯಾಣಕ್ಕೆ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಲು ಅನುಕೂಲವಾಗುವಂತೆ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ.

ರೈಲ್ವೇ ಸಚಿವಾಲಯವು ಸಾಕುಪ್ರಾಣಿಗಳ ಬುಕಿಂಗ್ ಹಕ್ಕುಗಳನ್ನು ಟಿಟಿಇಗೆ ನೀಡುವ ಬಗ್ಗೆಯೂ ಯೋಚಿಸುತ್ತಿದೆ. ಇದರೊಂದಿಗೆ ರೈಲ್ವೇ ಪ್ರಯಾಣಿಕರು ತಮ್ಮ ಸಾಕುಪ್ರಾಣಿಗಳನ್ನು ತಮ್ಮೊಂದಿಗೆ ರೈಲಿನಲ್ಲಿ ಯಾವುದೇ ತೊಂದರೆಯಿಲ್ಲದೆ ಕರೆದುಕೊಂಡು ಹೋಗಬಹುದಾಗಿದೆ.

ಪ್ರಸ್ತುತ ಪ್ರಯಾಣಿಕರು ತಮ್ಮ ಸಾಕು ಪ್ರಾಣಿಗಳನ್ನು ರೈಲಿನಲ್ಲಿ ಕರೆದೊಯ್ಯಲು ಪ್ಲಾಟ್‌ಫಾರ್ಮ್‌ನ ಪಾರ್ಸೆಲ್ ಬುಕಿಂಗ್ ಕೌಂಟರ್‌ನಲ್ಲಿ ಟಿಕೆಟ್ ಕಾಯ್ದಿರಿಸಬೇಕು.

ಭಾರತೀಯ ರೈಲ್ವೇಯು ಆನೆಗಳಿಂದ ಹಿಡಿದು ಪಕ್ಷಿಗಳವರೆಗೆ ಪ್ರಾಣಿಗಳ ಗಾತ್ರವನ್ನು ಅವಲಂಬಿಸಿ ತಮ್ಮ ಪ್ರೀತಿಪಾತ್ರ ಪ್ರಾಣಿಗಳೊಂದಿಗೆ ಒಮ್ಮೆ ಪ್ರಯಾಣಿಸಲು ಪ್ರಾಣಿಗಳ ಪೋಷಕರಿಗೆ ಕೆಲವು ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಹೊಂದಿದೆ.

ಕೆಲವು ಪ್ರಾಣಿಗಳನ್ನು ಪ್ರತ್ಯೇಕ ಗೊತ್ತುಪಡಿಸಿದ ಬೋಗಿಗಳಲ್ಲಿ ಸಾಗಿಸಬೇಕಾಗಿದ್ದರೂ, ಸಾಕುಪ್ರಾಣಿಗಳಾದ ಬೆಕ್ಕುಗಳು ಮತ್ತು ನಾಯಿಗಳು ರೈಲಿನ ಅದೇ ಬೋಗಿಗಳಲ್ಲಿ ತಮ್ಮ ಮಾಲೀಕರೊಂದಿಗೆ ಹೋಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read